ಬ್ಯೂಟಿ ಪ್ಲಾನೆಟ್ ಸಂಸ್ಥೆಯು ನೇಚರ್ಸ್ ಎಸೆನ್ಸ್ ಪ್ರೊಫೆಷನಲ್ ಕಂಪನಿಯ ಸಹಯೋಗದಲ್ಲಿ ಆಯೋಜಿಸಿದ್ದ ಸೌಂದರ್ಯ ತರಬೇತಿ ಮಾಸ್ಟರ್ಕ್ಲಾಸ್ ಜುಲೈ 14ರಂದು ಮಂಗಳೂರಿನ ಹೋಟೆಲ್ ಸಾಫ್ರನ್ನಲ್ಲಿ ನಡೆಯಿತು.


ಮೇಕಪ್, ಕೇಶವಿನ್ಯಾಸ, ಸೀರೆ ಧರಿಸುವ ಕಲೆ ಹಾಗೂ ಹೈಡ್ರಾ ಫೇಶಿಯಲ್ ತಂತ್ರಗಳ ಕುರಿತು ತಜ್ಞರಿಂದ ಪ್ರಾತ್ಯಕ್ಷಿಕೆ ಮತ್ತು ತರಬೇತಿ ನೀಡಲಾಯಿತು. ಕಾರ್ಯಕ್ರಮವನ್ನು ಎಡ್ನಾ ಜಾಥನ್, ಐಶ್ವರ್ಯ ಚಂದ್ರಶೇಖರ್, ಅನ್ವಿತಾ, ಲತಾ ಶಿವಮೊಗ್ಗ ಶ್ರೀಮತಿ ಪ್ರಿಯಾಂಕಾ, ಅಮಿತ್, ಶ್ರೀಮತಿ ಫ್ಲೇವಿ ಗ್ಲಾಡಿಸ್ ಡಿ’ಮೆಲ್ಲೋ ಹಾಗೂ ಶ್ರೀಮತಿ ಲತಾ ಹರೀಶ್ ಉದ್ಘಾಟಿಸಿದರು.


ತಜ್ಞರಾದ ESME ರಾಷ್ಟ್ರೀಯ ತರಬೇತುದಾರ ಶ್ರೀ ನೀರಜ್, ಪುನೀತ್ ಕುಲಾಲ್ ಹಾಗೂ ಶ್ರೀಮತಿ ಉಷಾ ರವರು ಆಧುನಿಕ ಸೌಂದರ್ಯ ತಂತ್ರಗಳ ಕುರಿತು ಮಾಹಿತಿ ನೀಡಿದರು. 200ಕ್ಕೂ ಹೆಚ್ಚು ಸೌಂದರ್ಯ ತಜ್ಞರು ಭಾಗವಹಿಸಿ ಪ್ರಾಯೋಗಿಕ ತರಬೇತಿ ಪಡೆದರು.

ಕಾರ್ಯಕ್ರಮವನ್ನು ಶ್ರೀ ಜಗದೀಶ್ ಬ್ಯೂಟಿ ಪ್ಲಾಂಟ್ ಮತ್ತು ಶ್ರೀಮತಿ ಪೂರ್ಣಿಮಾ ನೇಚರ್ಸ್ ಕಂಪನಿ ಆಯೋಜಿಸಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು.


