ಸಂತ ಅಲೋಶಿಯಸ್ ವಿದ್ಯಾರ್ಥಿಗಳಿಗೆ ಗದ್ದೆಯಲ್ಲಿ ಕೃಷಿ ಪಾಠ

ಮಂಗಳೂರು: ಪಾಠದ ಜೊತೆಗೆ ಕೃಷಿ ಮತ್ತು ಗದ್ದೆ ನಾಟಿಯ ಕುರಿತು ಅರಿವು ಮೂಡಿಸುವ ವಿಶಿಷ್ಟ ಕಾರ್ಯಕ್ರಮವು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯ ಕಾಲೇಜಿನ ವಿದ್ಯಾರ್ಥಿಗಳಿಗೆ ಕಟೀಲು ಸಮೀಪದ ಮಾರಡ್ಕ ದಲ್ಲಿ ಕೃಷಿಕ ಜಯ ಪೂಜಾರಿ ಯವರ ಗದ್ದೆಯಲ್ಲಿ ಲೂಕಸ್ ಸಲ್ದಾನ ಹಾಗೂ ಸತೀಶ್ ಸಲ್ದಾನ ರವರ ಸಹಕಾರದೊಂದಿಗೆ ಏರ್ಪಡಿಸಲಾಗಿತ್ತು.


ಗದ್ದೆ ನಾಟಿಯ ವಿಧಾನ ಗಳು, ಪಾಡ್ದನ ಹಾಡುಗಳು, ಗದ್ದೆಗಳಲ್ಲಿ ಆಚರಿಸುವ ಸಾಂಪ್ರದಾಯಿಕ ಕ್ರಮಗಳು,ಕೃಷಿಯ ಬಗೆಗಿನ ಅರಿವು ಹಾಗೂ ರೈತರ ಶ್ರಮದ ಜೊತೆಗೆ ರೈತರು ಸಮಾಜಕ್ಕೆ ನೀಡುವ ಕೊಡುಗೆಗಳ ಮಹತ್ವದ ಕುರಿತು ಕಾಲೇಜಿನ ಹಳೆಯ ವಿದ್ಯಾರ್ಥಿ ,ಕಾರ್ಯಕ್ರಮದ ಸಂಯೋಜಕ ಮೆಲ್ಸ್ಟನ್ ರೋಡ್ರಿಗಸ್ ಬಲ್ಲಾನ ರವರು ಮಾಹಿತಿಯನ್ನು ನೀಡಿದರು‌. ಕಾರ್ಯಕ್ರಮದಲ್ಲಿ 18 ಕೆ.ಎ.ಅರ್ ಬೆಟಲೀಯನ್ ಮಂಗಳೂರು ಇದರ ಎನ್.ಸಿ.ಸಿ ವಿದ್ಯಾರ್ಥಿಗಳು, ಕಾಲೇಜಿನ ಸಂಯೋಜಕರಾದ ಡಾ. ಸ್ಮಿತಾ ಡಿ.ಕೆ, ಕ್ಯಾಪ್ಟನ್ ಶಕಿನ್ ರಾಜ್ ಹಾಗೂ ಕಾಲೇಜಿನ ವಿದ್ಯಾರ್ಥಿಗಳು,ಸ್ಥಳೀಯರು ಉತ್ಸಾಹದಿಂದ ಪಾಲ್ಗೊಂಡಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!