ಡಾ ll. ಎನ್. ಎಸ್. ಎ. ಎಂ. ಕನ್ನಡ ಮಾಧ್ಯಮ ಪ್ರೌಢ ಶಾಲೆ, ನಿಟ್ಟೆ ಹಾಗೂ ಉಡುಪಿ ಜಿಲ್ಲಾ ಪೊಲೀಸ್ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ
ಇವರ ಸಂಯುಕ್ತ ಆಶ್ರಯದಲ್ಲಿ ಮಾದಕ ದ್ರವ್ಯ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಸಂಭ್ರಮ ಶನಿವಾರ ( ಬ್ಯಾಗ್ ರಹಿತ ದಿನ) ವಾಗಿ ಶಾಲೆಯಲ್ಲಿ ಆಚರಿಸಲಾಯಿತು.


ಕಾರ್ಯಕ್ರಮಮವನ್ನು ಉದ್ಘಾಟನೆ ಮಾಡಿದ ಕಾರ್ಕಳ ಗ್ರಾಮಾಂತರ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀ ಪ್ರಸನ್ನ ಎಂ. ಎಸ್. ರವರು ಮಾತನಾಡಿ ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳು, ಹಾಗೂ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ಅರಿವು ಮೂಡಿಸಿದರು.

ಹಾಗೆಯೇ ಮಾದಕ ವ್ಯಸನದಿಂದ ವ್ಯಕ್ತಿಯ ದೇಹದ ಯಾವುದೇ ಭಾಗಗಳನ್ನು ಮರುಜೋಡಣೆ ಮಾಡಬಹುದು ಆದರೆ ಮೆದುಳನ್ನು ಮಾತ್ರ ಮರುಜೋಡಣೆ ಮಾಡಲು ಸಾಧ್ಯವಿಲ್ಲ, ಆದ್ದರಿಂದ ಮೆದುಳಿಗೆ ಹಾನಿಯಾಗುವಂತಹ ಯಾವುದೇ ಮಾದಕ ದ್ರವ್ಯ ಸೇವನೆ ಮಾಡಬಾರದು ಎನ್ನುವ ಮುಖ್ಯ ಮಾಹಿತಿಯನ್ನು ನೀಡುವುದರೊಂದಿಗೆ ರಸ್ತೆ ಸಂಚಾರಿ ನಿಯಮ, ಪೋಕ್ಸೋ ಕಾಯಿದೆಯಂತಹ ಮುಖ್ಯ ವಿಷಯಯಗಳ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಿದರು.


ಕಾರ್ಯಕ್ರಮದ ವೇದಿಕೆಯಲ್ಲಿ ಕಾರ್ಕಳ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿ ಶ್ರೀ ರುದ್ರೇಶ್ ಸರ್, ಶಾಲಾ ಸಂಸತ್ತಿನ ನಾಯಕಿ 10ನೇ ತರಗತಿಯ ಕು ll ಯಶಸ್ವಿ. ವೈ. ಆಚಾರ್ಯ, ಉಪನಾಯಕ ವಿಜೇಶ್ ಆಚಾರ್ಯ ಉಪಸ್ಥಿತರಿದ್ದರು.
ಪ್ರೌಢ ಶಾಲೆಯ ಎಲ್ಲಾ ಅಧ್ಯಾಪಕರು ಹಾಗೂ ವಿದ್ಯಾರ್ಥಿವೃಂದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕುll ದೀಕ್ಷಾ ದೇವಾಡಿಗ ಹಾಗೂ ತಂಡದವರು ಪ್ರಾರ್ಥನೆಗೈದು, ಶಾಲಾ ಶಿಕ್ಷಣ ಮಂತ್ರಿ ಕುll ಖ್ಯಾತಿ ಧನ್ಯವಾದ ಸಮರ್ಪಣೆ ಮಾಡಿದರು, ಶಾಲೆಯ ಹಿರಿಯ ಶಿಕ್ಷಕರಾದ ಶ್ರೀ ಚಂದ್ರ ನಾಯ್ಕ್ ಟಿ, ಪ್ರಾಸ್ತವಿಕ ನುಡಿಗಳೊಂದಿಗೆ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

