ಮಂಜೇಶ್ವರ : ತೀಯಾ ಸಮಾಜ ಸಭಾ ಭವನ (ರಿ ) ಉದ್ಯಾವರ ಮಾಡ ಮತ್ತು ಕಂಪಾನಿಯೋ ನೆಮ್ಮದಿ ವೆಲ್ನೆಸ್ ಸೆಂಟರ್ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ 134ನೇ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರವು ಇಂದು ತೀಯಾ ಸಮಾಜ ಸಭಾ ಭವನದಲ್ಲಿ ಆರಂಭಗೊಂಡಿತು.


ಶಿಬಿರವನ್ನು ಉದ್ಯಾವರ ಮಾಡದ ಅಣ್ಣ ದೈವದ ಪಾತ್ರಿ ಶ್ರೀ ರಾಜ ಬೆಳ್ಚಪ್ಪಾಡರು ಮತ್ತು ತಮ್ಮ ದೈವದ ಪಾತ್ರಿ ತಿಮಿರಿ ಬೆಲ್ಚಾಪ್ಪಾಡರು ಒಟ್ಟಿಗೆ ಸೇರಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ನೀಲಯ್ಯ ಪುಮಣ್ಣು ವಹಿಸಿದ್ದರು. ಮಾಹಿತಿ ನೀಡುವವರು ಕೆ. ಪ್ರಭಾಕರ ಸಾಲ್ಯಾನ್ ಬಾಕಿಲಗುತ್ತು ,ಮುಖ್ಯ ಅತಿಥಿಗಳಾಗಿ ಶ್ರೀ ಪದ್ಮನಾಭ ಗುರಿಕಾರ ಹಾಗೂ ಶ್ರೀ ಹರೀಶ್ ಶೆಟ್ಟಿ ಮಾಡ ಭಾಗವಹಿಸಿದ್ದರು.

ಜುಲೈ 18ರಿಂದ ಅಗೋಸ್ಟ್ 3ರವರೆಗೆ ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಶಿಬಿರ ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಫೂಟ್ ಪಲ್ಸ್ ಥೆರಪಿ ಚಿಕಿತ್ಸೆಯ ಸೌಲಭ್ಯ ಒದಗಿಸಲಾಗುತ್ತಿದೆ. ಫೂಟ್ ಪಲ್ಸ್ ಥೆರಪಿಯಲ್ಲಿ ವಿದ್ಯುತ್ ಪ್ರಚೋದನೆಯ ಮೂಲಕ ಮಾಂಸಖಂಡಗಳನ್ನು ಉತ್ತೇಜಿಸಿ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡಲಾಗುತ್ತದೆ ಎಂದು ಆಯೋಜಕರು ತಿಳಿಸಿದರು. ಆಸಕ್ತ ಸಾರ್ವಜನಿಕರು ಈ ಉಚಿತ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ.


