ವಿಶ್ವ ಹಿಂದೂ ಪರಿಷತ್ ಮುಖಂಡ ರವಿಚಂದ್ರ ಶೆಟ್ಟಿ ಅಶೋಕನಗರ ಅವರ ಅಗಲಿಕೆಗೆ ಆಳವಾದ ಕಂಬನಿ: ವಿಶ್ವ ಹಿಂದೂ ಪರಿಷದ್ ಸಂತಾಪ

ವಿಶ್ವ ಹಿಂದೂ ಪರಿಷತ್ ಉರ್ವಾ ಖಂಡ ಸಮಿತಿಯ ಅಧ್ಯಕ್ಷರಾಗಿ ಹಲವು ವರ್ಷಗಳ ಕಾಲ ಅತ್ಯಂತ ಶ್ರದ್ಧೆ ಹಾಗೂ ನಿಷ್ಠೆಯಿಂದ ಜವಾಬ್ದಾರಿ ನಿರ್ವಹಿಸಿದ್ದ ರವಿಚಂದ್ರ ಶೆಟ್ಟಿ ಅಶೋಕನಗರ ಅವರ ಅಕಾಲಿಕ ಮರಣಕ್ಕೆ ವಿಶ್ವ ಹಿಂದೂ ಪರಿಷತ್ ತೀವ್ರ ಸಂತಾಪ ವ್ಯಕ್ತಪಡಿಸಿದೆ.


ರವಿಚಂದ್ರ ಶೆಟ್ಟಿ ಅವರು ಸನಾತನ ಧರ್ಮದ ಮೇಲಿನ ಅಪಾರ ನಿಷ್ಠೆ, ಅನನ್ಯ ಸೇವಾ ಮನೋಭಾವನೆ ಹಾಗೂ ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿತ್ವಕ್ಕೆ ಹೆಸರಾಗಿದ್ದವರು. ಎಲ್ಲಾಕಾರ್ಯಕರ್ತರೊಡನೆ ಆತ್ಮೀಯರಾಗಿದ್ದ ಸರಳ ವ್ಯಕ್ತಿತ್ವ, ಸಂಘಟನೆಯ ಏಳಿಗೆಗಾಗಿ ಹಗಲಿರುಳು ಶ್ರಮಿಸಿದ ಮಹಾನ್ ಸೇವಕ. ಅವರ ಅಗಲಿಕೆಯು ಸಂಘಟನೆಗೆ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ.ಅವರ ಆತ್ಮಕ್ಕೆ ಸದ್ಗತಿ ಸಿಗಲೆಂದು ಹಾಗೂ ಈ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗದವರಿಗೆ ಮತ್ತು ಅಭಿಮಾನಿಗಳಿಗೆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇವೆ. ಎಂದು ವಿಶ್ವ ಹಿಂದೂ ಪರಿಷತ್ ಪ್ರಮುಖರಾದ ಶರಣ್ ಪಂಪುವೆಲ್, ಶಿವಾನಂದ್ ಮೆಂಡನ್, ಎಚ್ ಕೆ ಪುರುಷವೋತ್ತಮ, ಮನೋಹರ್ ಸುವರ್ಣ ಹಾಗೂ ರವಿ ಅಸೈಗೋಳಿ ಸಂತಾಪ ಸೂಚಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!