ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಬಹು ಬೇಡಿಕೆಯ ಎಂ.ಬಿ.ಎ. (ಅಂತಾರಾಷ್ಟ್ರೀಯ ವ್ಯವಹಾರ) ಸಂಧ್ಯಾ ಕೋರ್ಸ್‌ಗೆ ಪ್ರವೇಶಾತಿ ಆರಂಭ

ಮಂಗಳೂರು ವಿಶ್ವವಿದ್ಯಾಲಯದ ಘಟಕ ಕಾಲೇಜಾದ ವಿಶ್ವವಿದ್ಯಾಲಯ ಕಾಲೇಜು ಮಂಗಳೂರಿನ ಎಂ.ಬಿ.ಎ. (ಅಂತಾರಾಷ್ಟ್ರೀಯ ವ್ಯವಹಾರ) ವಿಭಾಗದಲ್ಲಿ 2026–27ನೇ ಸಾಲಿನ ಸಂಧ್ಯಾ (Evening Programme) ಕೋರ್ಸ್‌ಗೆ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಿದೆ.

ಉದ್ಯೋಗದಲ್ಲಿರುವ ವೃತ್ತಿಪರರು ಹಾಗೂ ಉನ್ನತ ಶಿಕ್ಷಣ ಮುಂದುವರಿಸಲು ಬಯಸುವ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಈ ಕೋರ್ಸ್ ರೂಪಿಸಲಾಗಿದ್ದು, “ಕಲಿಯುತ್ತಲೇ ಸಂಪಾದಿಸಿ” (Learn While You Earn) ಪರಿಕಲ್ಪನೆಯಡಿ ನಿಯಮಿತ ಸಂಜೆ ತರಗತಿಗಳನ್ನು ನಡೆಸಲಾಗುತ್ತದೆ. ಜಾಗತಿಕ ವ್ಯಾಪಾರ, ಅಂತರರಾಷ್ಟ್ರೀಯ ವ್ಯವಹಾರ ಹಾಗೂ ಸಮಕಾಲೀನ ವ್ಯವಹಾರ ತಂತ್ರಗಳ ಮೇಲೆ ಕೇಂದ್ರೀಕೃತ ಪಠ್ಯಕ್ರಮವನ್ನು ಹೊಂದಿದೆ.

ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ 77603 99557, 74837 43131 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು. https://universitycollegemangalore.com ವೆಬ್ ಸೈಟ್ ಮೂಲಕ ಹಾಗೂ eveningmbaib@gmail.com ಇ-ಮೇಲ್ ಮೂಲಕ ಮಾಹಿತಿ ಪಡೆಯಬಹುದಾಗಿದೆ ಅಥವಾ ಪ್ರಕಟಣೆಯಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!