ಮಂಗಳೂರು ಜೆಪ್ಪಿಮೊಗರು ಮನೆಯಲ್ಲಿ ಯಾರು ಇಲ್ಲದೆ ಅವಧಿಯಲ್ಲಿ ದಿನಾಂಕ 04-08-2026 ರಂದು ಯಾರೋ ಕಳ್ಳರು ಮನೆಯ ಬಾಗಿಲಿಗೆ ಅಳವಡಿಸಿದ್ದ ಬೀಗವನ್ನು ಯಾವುದೋ ಆಯುಧದಿಂದ ಮುರಿದು ಮನೆಯೊಳಗೆ ನುಗ್ಗಿ ಮನೆಯ ಕಪಾಟಿನಲ್ಲಿರುವ 14 ಗ್ರಾಂ ಚಿನ್ನದ ಸರ, ತಲಾ 2 ಗ್ರಾಂ ತೂಕ ಇರುವ 2 ಉಂಗುರ ಹಾಗೂ 25.000/- ನಗದು ಹಣವನ್ನು ಕಳ್ಳತನ ಮಾಡಿರುವುದಾಗಿದೆ. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಠಾಣಾ ಅ.ಕ್ರ 106/2026 ಕಲಂ 305(a),331(3) ಬಿ.ಎನ್.ಎಸ್ ಪ್ರಕರಣ ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿದಂತೆ ವಿಶೇಷ ತಂಡವನ್ನು ರಚಿಸಲಾಗಿದ್ದು, ದಿನಾಂಕ 11-08-2026 ರಂದು ನಗರದ ತಲಪಾಡಿಯ ಬಳಿ ಬಸ್ ಸ್ಟ್ಯಾಂಡ್ ಬಳಿ ಇರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ವಶಕ್ಕೆ ಪಡೆದು, ಪ್ರಕರಣದ ಆರೋಪಿ ಸಮಧನ ಸಕಹರಿ ನರಳೆ ಪ್ರಾಯ 26 ವರ್ಷ ತಂದೆ: ಸಹಕಾರಿ ನರಳೆ ವಾಸ: ನರಳೆವಾಡಿ ಗ್ರಾಮ, ಸನಮಾಧಿ ಪೋಸ್ಟ್, ಜತ್ ತಾಲೂಕು ಸಾಂಗ್ಲಿ ಮಹರಾಷ್ಟ್ರ ರಾಜ್ಯ ಎಂಬಾತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಕರಣದಲ್ಲಿ ಕಳವು ಮಾಡಿರುವ ಸೊತ್ತುಗಳನ್ನು, ಕೃತ್ಯಕ್ಕೆ ಮಾಡಲು ಉಪಯೋಗಿಸಿದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.


