ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀ ಕೃಷ್ಣ ವೇಷ ಸ್ಪರ್ಧೆಯ ಮಾಹಿತಿ ಪತ್ರ ಅನಾವರಣ, ಸಾರ್ವಜನಿಕ ರಜೆ ಘೋಷಿಸುವಂತೆ ಸರಕಾರಕ್ಕೆ ಮನವಿ

ಸೆಪ್ಟೆಂಬರ್ 4, ಶುಕ್ರವಾರ ಶ್ರೀ ಕ್ಷೇತ್ರ ಕದ್ರಿಯ ರಾಜಾಂಗಣದಲ್ಲಿ ದೇವಳದ ಸಹಯೋಗದೊಂದಿಗೆ ಕಲ್ಕೂರ ಪ್ರತಿಷ್ಠಾನವು ಹಮ್ಮಿಕೊಂಡಿರುವ ರಾಷ್ಟ್ರೀಯ ಮಕ್ಕಳ ಉತ್ಸವ ಶ್ರೀ ಕೃಷ್ಣ ವೇಷ ಸ್ಪರ್ಧೆಯ ವಿವರಗಳನ್ನೊಳಗೊಂಡ ಮಾಹಿತಿ ಪತ್ರದ ಅನಾವರಣ ಇತ್ತೀಚೆಗೆ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಜರಗಿತು.


ಪುಟಾಣಿಗಳಾದ ಶಿವಾವೃತ ಮತ್ತು ಪ್ರಗ್ಯಾ ಅವರ ಉಪಸ್ಥಿತಿಯಲ್ಲಿ ನಿವೃತ್ತ ಅಪರ ಜಿಲ್ಲಾಧಿಕಾರಿ ಡಾ. ಪ್ರಭಾಕರ ಶರ್ಮ ಮಾಹಿತಿ ಪತ್ರ ಅನಾವರಣಗೊಳಿಸಿ ಸ್ಪರ್ಧೆಯು ಅರ್ಥಪೂರ್ಣವಾಗಿ ನೆರವೇರಲೆಂದು ಹಾರೈಸಿದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಾಸ್ತಾವಿಕವಾಗಿ ಮಾತನಾಡಿ ಹೆಚ್ಚು ಹೆಚ್ಚು ಮಕ್ಕಳನ್ನು ಈ ರಾಷ್ಟ್ರೀಯ ಮಕ್ಕಳ ಉತ್ಸವದಲ್ಲಿ ತೊಡಗಿಸುವಲ್ಲಿ ಹೆತ್ತವರು ಪ್ರೇರೇಪಿಸಬೇಕೆಂದು ವಿನಂತಿಸಿಕೊಂಡರಲ್ಲದೆ, ಬೇಧ ಭಾವವಿಲ್ಲದೆ ಸರ್ವರೂ ಪಾಲ್ಗೊಳ್ಳಲಿರುವ ಈ ರಾಷ್ಟ್ರೀಯ ಮಕ್ಕಳ ಉತ್ಸವದ ಆಚರಣೆಗೆ ಅನುಕೂಲವಾಗುವಂತೆ ಉಭಯ ಜಿಲ್ಲೆಗಳ ಶಾಲಾ ಮಕ್ಕಳಿಗೆ ಆದ್ಯತೆಯ ನೆಲೆಯಲ್ಲಿ ಅಧಿಕೃತ ರಜೆ ಘೋಷಿಸುವಂತೆ ಸರಕಾರಕ್ಕೆ ಮನವಿ ಮಾಡಿಕೊಳ್ಳಲಾಗುವುದೆಂದರು.


ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ, ಉರ್ವ ಸುರೇಂದ್ರ ರಾವ್, ಪಮ್ಮಿ ಕೊಡಿಯಾಲ್ ಬೈಲ್, ಚಂದ್ರಶೇಖರ್ ಶೆಟ್ಟಿ, ಕದ್ರಿ ನವನೀತ ಶೆಟ್ಟಿ, ಶಿವಪ್ರಸಾದ್ ಪ್ರಭು, ಪ್ರಭಾಕರ ರಾವ್ ಪೇಜಾವರ, ಸಮೀರ್ ಪುರಾಣಿಕ್, ಶ್ರೀಕಾಂತ್ ನೆಟ್ಟಣಿಗೆ, ಡಾ. ಉದಯ ಕುಮಾರ್, ಗಣೇಶ್,ವಿನಯಾನಂದ, ತಮ್ಮ ಲಕ್ಷ್ಮಣ, ಸುಧಾಕರ ರಾವ್ ಪೇಜಾವರ, ತಾರಾನಾಥ ಹೊಳ್ಳ, ಅಶ್ವತ್ಥಾಮ ರಾವ್, ಪೂರ್ಣಿಮಾ ಪೇಜಾವರ, ವಿಜಯಲಕ್ಷ್ಮೀ ಬಿ. ಶೆಟ್ಟಿ, ಶಶಿಪ್ರಭಾ ಐತಾಳ್, ಜಯಲಕ್ಷ್ಮೀ ಟೀಚರ್, ಪೂರ್ಣಿಮಾ ಶಾಸ್ತ್ರಿ , ಸುಮನಾ ಘಾಟೆ, ಸುಕಲತಾ ಸುವರ್ಣ, ಶೋಭಾ ಐತಾಳ್ ಮತ್ತಿತರರು ಉಪಸ್ಥಿತರಿದ್ದರು. ದಯಾನಂದ ಕಟೀಲ್ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!