ಉಳ್ಳಾಲ : ಪ್ರವಾದಿ ಜನ್ಮ ದಿನವಾದ ಇಂದು ನಾವು ಈದ್ ಮಿಲಾದ್ ಆಚರಣೆ ಜೊತೆಗೆ ಅವರ ತತ್ವಾದರ್ಶಗಳನ್ನು , ಅವರು ಜೀವನದಲ್ಲಿ ಅಳವಡಿಸಿಕೊಂಡ ಕ್ರಮಗಳನ್ನು ನಾವು ಮೈಗೂಡಿಸಿಕೊಂಡು ಜೀವಿಸಬೇಕು ಎಂದು ಹಜ್ ಹಾಗೂ ವಕ್ಫ್ ಸಚಿವ ಯುಟಿ ಖಾದರ್ ಕರೆ ನೀಡಿದರು.
ಅವರು ದರ್ಗಾ ಅಧೀನದಲ್ಲಿ ಬರುವ 27 ಮೊಹಲ್ಲಾ ಗಳ ವ್ಯಾಪ್ತಿಯ 34 ಮದ್ರಸ ವಿದ್ಯಾರ್ಥಿಗಳ ಕೋಟೆಪುರ ದಿಂದ ಮುಕಚೇರಿ, ಆಝಾದ್ ನಗರ ರಸ್ತೆ ಯಾಗಿ ಮೇಲಂಗಡಿ ಮೂಲಕ ದರ್ಗಾ ವರೆಗೆ ನಡೆದ ಕಾಲ್ನಡಿಗೆ ಜಾಥಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಈ ಬಾರಿ 11 ಸಾವಿರ ಮಂದಿ ಹಜ್ ಗೆ ಅರ್ಜಿ ಸಲ್ಲಿಸಿದ್ದಾರೆ. ಹಜ್ ಜೊತೆ ಉಮ್ರಾವನ್ನು ಹಜ್ ಕಮಿಟಿ ಅಧೀನದಲ್ಲಿ ವ್ಯವಸ್ಥೆ ಮಾಡಲಾಗುವುದು. ಯಾತ್ರಾರ್ಥಿಗಳ ಮಾಹಿತಿ ಪಡೆಯಲು ವೆಬ್ ಪೋರ್ಟಲ್ ಆರಂಭಿಸಲಾಗುವುದು.ಹಜ್, ಉಮ್ರಾ ವ್ಯವಸ್ಥೆ ಮಾಡುವ ಖಾಸಗಿ ಸಂಸ್ಥೆಗಳು ಯಾತ್ರಾರ್ಥಿಗಳನ್ನು ಅರ್ಧ ದಾರಿಯಲ್ಲಿ ಬಿಟ್ಟು ಬಂದಿರುವ ಬಗ್ಗೆ ಆರೋಪಗಳು ಬಹಳಷ್ಟು ಇವೆ. ಈ ಹಿನ್ನೆಲೆಯಲ್ಲಿ ಖಾಸಗಿ ಸಂಸ್ಥೆಗಳಿಗೆ ಹಜ್ , ಉಮ್ರಾ ಗಳಿಗೆ ಸಂಬಂಧಿಸಿ ವಿಶೇಷ ಕಾನೂನು ಜಾರಿ ಮಾಡಲಾಗುವುದು ಎಂದರು.ದರ್ಗಾ ಅಧ್ಯಕ್ಷ ಹನೀಫ್ ಹಾಜಿ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ಕೋಶಾಧಿಕಾರಿ ನಾಝೀಮ್ ಮುಕಚೇರಿ ಅಬ್ದುಲ್ ಖಾದರ್ ಕೋಡಿ, ಕಾರ್ಯದರ್ಶಿ ಮುಸ್ತಫಾ ಮದನಿ ನಗರ,ಕಣಚೂರು ಮೋನು,ಕೋಟೆಪುರ ಮಸೀದಿ ಅಧ್ಯಕ್ಷ ಫಾರೂಕ್ ಅಬ್ಬಾಸ್ ಕೋಟೆಪುರ, ಅಬ್ಬಾಸ್ ಕೋಟೆಪುರ, ಮದನಿ ಕಾಲೇಜು ಅಹ್ಮದ್ ಕುಟ್ಟಿ ಮುಸ್ಲಿಯಾರ್ , ಮೋನು , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಬೋಳಿಯಾರ್, ಅರೆಬಿಕ್ ಟ್ರಸ್ಟ್ ಉಪಾಧ್ಯಕ್ಷ ಅಶ್ರಫ್ ಹಾಜಿ ಕೋಡಿ,ದರ್ಗಾ ಅಧೀನದ 27 ಮೊಹಲ್ಲಾ ಗಳ ವ್ಯಾಪ್ತಿಯ 34 ಮದ್ರಸ,ಮಸೀದಿ ಗಳ ಖತೀಬರು ಮುಅಲ್ಲಿಂಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕೋಟೆಪುರ ಮಸೀದಿ ಖತೀಬ್ ಇರ್ಷಾದ್ ಸಖಾಫಿ ದುಆ ನೆರವೇರಿಸಿದರು.ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ ಸ್ವಾಗತಿಸಿದರು.


[7797]Savayaslot: Login Daftar APK & Slot Gacor Deposit Dana,Savayaslot memudahkan login dan daftar savayaslot APK. Nikmati slot gacor dana tanpa potongan dan situs slot deposit pulsa telkomsel. Join sekarang juga! visit: savayaslot