ಮಂಗಳೂರಿನಲ್ಲಿ ಮೊದಲ ‘ಝೈಸ್ ವಿಷನ್ ಸೆಂಟರ್’ ಆರಂಭ

ಮಂಗಳೂರು: ಪ್ರೀಮಿಯಂ ಲೈಫ್‌ಸ್ಟೈಲ್ ಐವೇರ್ ಬ್ರ್ಯಾಂಡ್ ಕ್ಯಾವೋಲಿನ್, ಝೈಸ್ ಇಂಡಿಯಾ ಸಹಭಾಗಿತ್ವದಲ್ಲಿ ನಗರದ ಫೋರಂ ಫಿಜಾ ಮಾಲ್‌ನಲ್ಲಿ ಮಂಗಳೂರಿನ ಮೊದಲ ‘ಝೈಸ್ ವಿಷನ್ ಸೆಂಟರ್’ ಆರಂಭಿಸಿದೆ.

ಕ್ಯಾವೋಲಿನ್‌ನ ಪ್ರೀಮಿಯಂ ಐವೇರ್ ಪರಿಣತಿಯನ್ನು ಝೈಸ್‌ನ ನಿಖರ ಆಪ್ಟಿಕ್ಸ್ ಹಾಗೂ ದೃಷ್ಟಿ ಆರೈಕೆ ತಂತ್ರಜ್ಞಾನದೊಂದಿಗೆ ಸಂಯೋಜಿಸಿ ಗ್ರಾಹಕರಿಗೆ ಸಮಗ್ರ ಮತ್ತು ವೈಯಕ್ತಿಕಗೊಳಿಸಿದ ದೃಷ್ಟಿ ಆರೈಕೆ ಅನುಭವ ನೀಡುವುದು ಕೇಂದ್ರದ ಉದ್ದೇಶವಾಗಿದೆ ಎಂದು ಕ್ಯಾವೋಲಿನ್ ವ್ಯವಸ್ಥಾಪಕ ನಿರ್ದೇಶಕ ನಿಖಿಲ್ ನಂದೀಶ ಉದ್ಘಾಟನಾ ಸಮಾರಂಭದಲ್ಲಿ ತಿಳಿಸಿದರು.

ಫಿಜಾ ಬೈ ನೆಕ್ಸಸ್ ಮಾಲ್‌ನ ಮೊದಲ ಮಹಡಿಯಲ್ಲಿ ಸುಮಾರು 1,000 ಚದರ ಅಡಿ ವಿಸ್ತೀರ್ಣದಲ್ಲಿ ಕೇಂದ್ರವನ್ನು ನಿರ್ಮಿಸಲಾಗಿದೆ. ಇಲ್ಲಿ ವೈಯಕ್ತಿಕ ಸಮಾಲೋಚನೆ, ಸುಧಾರಿತ ಝೈಸ್ ತಂತ್ರಜ್ಞಾನ, ನಿಖರ ದೃಷ್ಟಿ ವಿಶ್ಲೇಷಣೆ ಹಾಗೂ ಗ್ರಾಹಕರ ಅಗತ್ಯ ಮತ್ತು ಜೀವನಶೈಲಿಗೆ ಅನುಗುಣವಾದ ಪ್ರೀಮಿಯಂ ಲೆನ್ಸ್ ಪರಿಹಾರಗಳನ್ನು ಒದಗಿಸಲಾಗುತ್ತದೆ ಎಂದು ಅವರು ಹೇಳಿದರು.

ಝೈಸ್ ಇಂಡಿಯಾದ ವ್ಯವಹಾರ ಮುಖ್ಯಸ್ಥ ರೋಹನ್ ಪಾಲ್ ಮಾತನಾಡಿ, ಕೇಂದ್ರದಲ್ಲಿ ವೈಯಕ್ತಿಕಗೊಳಿಸಿದ ಕಣ್ಣಿನ ಆರೈಕೆ, ಪ್ರೀಮಿಯಂ ಝೈಸ್ ಲೆನ್ಸ್ ಪರಿಹಾರಗಳು ಹಾಗೂ ಪರಿಣಿತ ಸಮಾಲೋಚನೆ ದೊರೆಯಲಿದೆ ಎಂದು ತಿಳಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!