ಮಂಗಳೂರು:* ಜಲಚಿಕಿತ್ಸೆಯ (Aquatic Therapy) ಭಾಗವಾಗಿ ನಗರದ ಸಾನಿಧ್ಯ ವಸತಿ ಶಾಲೆಯಲ್ಲಿ ಮಕ್ಕಳಿಗೆ ಈಜು ತರಬೇತಿಯನ್ನು ಪ್ರಾರಂಭಿಸಲಾಗಿದೆ.


ತರಬೇತಿಯ ಅಂಗವಾಗಿ ಮಕ್ಕಳು ಈಜುಕೊಳದಲ್ಲಿ ತರಬೇತುದಾರರ ಮಾರ್ಗದರ್ಶನದಂತೆ ಉತ್ಸಾಹದಿಂದ ಈಜುವ ಮೂಲಕ ತರಬೇತಿಯಲ್ಲಿ ಸಕ್ರಿಯರಾದರು. ಮಕ್ಕಳ ದೈಹಿಕ ಚಟುವಟಿಕೆ ಹಾಗೂ ಜಲಚಿಕಿತ್ಸೆಗೆ ಪೂರಕವಾಗುವ ನಿಟ್ಟಿನಲ್ಲಿ ಈ ತರಬೇತಿಯನ್ನು ಆಯೋಜಿಸಲಾಗಿದೆ.

ತರಬೇತುದಾರರಾದ ಜುವೆಲ್ ಹಾಗೂ ಲಕ್ಷ್ಮೀ ಅವರು ಮಕ್ಕಳಿಗೆ ಈಜು ತರಬೇತಿ ನೀಡಿದರು. ಸೇಂಟ್ ಅಲೋಶಿಯಸ್ ಕಾಲೇಜಿನ ಈಜುಕೊಳದ ಮುಖ್ಯಸ್ಥ ನವೀನ್ ಅವರ ಸಹಕಾರದಿಂದ ತರಬೇತುದಾರರ ವ್ಯವಸ್ಥೆ ಮಾಡಲಾಗಿತ್ತು.


Really loving the game variety here. It keeps things exciting and the graphics are top notch. Definitely spending my weekends on phsmjili.