ಜೆಪ್ಪು ಬಪ್ಪಾಲ್ ತಾಂತಿನಗರ ರಸ್ತೆ ಅಭಿವೃದ್ಧಿಗೆ ₹40 ಲಕ್ಷ ಅನುದಾನ; ಗುದ್ದಲಿ ಪೂಜೆ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 55ನೇ ಅತ್ತಾವರ ವಾರ್ಡಿನ ಜೆಪ್ಪು ಬಪ್ಪಾಲ್ ತಾಂತಿನಗರ 2ನೇ ಮತ್ತು 3ನೇ ಅಡ್ಡರಸ್ತೆಗಳ ರಸ್ತೆ ಅಭಿವೃದ್ಧಿ ಕಾಮಗಾರಿಯು 40 ಲಕ್ಷ ರೂ. ವಿಶೇಷ ಅನುದಾನದಲ್ಲಿ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಗುದ್ದಲಿ ಪೂಜೆ ನಡೆಯಿತು.

ನಂತರ ಮಾತನಾಡಿದ ಶಾಸಕರು, ಈ ಭಾಗದ ಅಭಿವೃದ್ಧಿಯ ದೃಷ್ಟಿಯಿಂದ ಸ್ಥಳೀಯ ಬಿಜೆಪಿ ಪ್ರಮುಖರು, ನಿವಾಸಿಗಳು ಸಾಕಷ್ಟು ಬಾರಿ ನನ್ನಲ್ಲಿ ಮನವಿ ಮಾಡಿದ್ದರು. ಅದರಂತೆ ಅನುದಾನಗಳನ್ನು ಜೋಡಿಸಿಕೊಂಡು ಈ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಗುತ್ತಿಗೆ ವಹಿಸಿಕೊಂಡವರು ಅತೀ ಶೀಘ್ರದಲ್ಲಿ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ನಿಕಟ ಪೂರ್ವ ಪಾಲಿಕೆ ಸದಸ್ಯರಾದ ಶೈಲೇಶ್ ಬಿ.ಶೆಟ್ಟಿ, ಪ್ರಮುಖರಾದ ಪುಷ್ಪರಾಜ್ ಶೆಟ್ಟಿ, ಲಲ್ಲೇಶ್, ಪ್ರಮೋದ್ ಕೊಟ್ಟಾರಿ, ರಾಜೇಂದ್ರ ಶೆಟ್ಟಿ, ಸೋಮಶೇಖರ್, ಭಾಸ್ಕರ್ ರಾವ್, ನಾರಾಯಣ ಕುಂದರ್, ಲೋಕೇಶ್, ಪ್ರಾಣೇಶ್, ತರುಣ್, ಪ್ರವೀಣ್ ಪಿ.ಆರ್, ಚಂದ್ರಶೇಖರ್, ಮಹಿಳಾ ಪ್ರಮುಖರಾದ ಲಲಿತಾ, ಪ್ರಿತಾ ಕಾಮತ್, ಪೂಜಾ, ಅರ್ಜನಾ ರೈ, ಸುಧಾಮ.ಯು, ರತನ್, ವಿನೋದ್, ಮೋಹಿನಿ ಚಂದ್ರಕಾಂತ್, ನಂದಿನಿ, ಧೀರ್ ಕುಮಾರ್, ಇನ್ನಿತರರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!