ಸಚಿವ ಸಂಪುಟ ಸಭೆ ಹಿನ್ನೆಲೆ: ಮಂಗಳೂರಿಗೆ ‘ಅಂಬಾರಿ’ ಬಸ್ ಆಗಮನ

ಮಂಗಳೂರು:ನಾಳೆ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಸಂಚಾರಕ್ಕೆ ‘ಅಂಬಾರಿ’ ಬಸ್ ಮಂಗಳೂರಿಗೆ ಆಗಮಿಸಿದೆ.

ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಿಂದ ಪಡೀಲ್‌ನ ಪ್ರಜಾಸೌಧದವರೆಗೆ ಮುಖ್ಯಮಂತ್ರಿ ಸಂಚರಿಸಲಿರುವ ಹಿನ್ನೆಲೆಯಲ್ಲಿ, ಇಂದು ಮಂಗಳೂರಿಗೆ ಬಂದಿಳಿದ ‘ಅಂಬಾರಿ’ ಬಸ್‌ನ್ನು ಉಸ್ತುವಾರಿ ಸಚಿವ ಯು.ಟಿ. ಖಾದರ್ ಪರಿಶೀಲಿಸಿದರು.

ಜಿಲ್ಲಾಧಿಕಾರಿ ದರ್ಶನ್ ಹಾಗೂ ಡಿಸಿಪಿ ಶಾಮ್ ವರ್ಗಿಸ್ IPS ಸೇರಿದಂತೆ ಅಧಿಕಾರಿಗಳು ಬಸ್ ಪರಿಶೀಲನೆ ನಡೆಸಿದರು.

ಮುಖ್ಯಮಂತ್ರಿಗಳ ಸಂಚಾರದ ಹಿನ್ನೆಲೆಯಲ್ಲಿ ಭದ್ರತಾ ವ್ಯವಸ್ಥೆ ಹಾಗೂ ಸಂಚಾರ ವ್ಯವಸ್ಥೆಯ ಸಿದ್ಧತೆಗಳನ್ನೂ ಅಧಿಕಾರಿಗಳು ಪರಿಶೀಲಿಸಿದರು.

SHARE
Loading spinner

One thought on “ಸಚಿವ ಸಂಪುಟ ಸಭೆ ಹಿನ್ನೆಲೆ: ಮಂಗಳೂರಿಗೆ ‘ಅಂಬಾರಿ’ ಬಸ್ ಆಗಮನ

Leave a Reply

Your email address will not be published. Required fields are marked *

error: Content is protected !!