ಮಂಗಳೂರಿನಲ್ಲಿ ಬೀಚ್ ಕ್ಲೀನಿಂಗ್‌ನಲ್ಲಿ ಸಚಿವ ಯತೀಂದ್ರ ಸಿದ್ಧರಾಮಯ್ಯ ಭಾಗಿ

ಮಂಗಳೂರು:ಮಂಗಳೂರಿನಲ್ಲಿ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ಧರಾಮಯ್ಯ ಅವರು ಬೀಚ್ ಕ್ಲೀನಿಂಗ್ ಕೈಗೊಂಡರು.ಮಹಾನಗರ ಪಾಲಿಕೆ ಮತ್ತು ಸ್ವಚ್ಛ ಮಂಗಳೂರು ಆಶ್ರಯದಲ್ಲಿ ನಡೆದ ಬೀಚ್ ಕ್ಲೀನಿಂಗ್ ಕಾರ್ಯಕ್ರಮದಲ್ಲಿ‌ ಡಾ.ಯತೀಂದ್ರ ಭಾಗವಹಿಸಿದರು.

ಈ ಸಂದರ್ಭ ಮಾತನಾಡಿದ ಅವರು “ಮಂಗಳೂರು ಮಹಾ ನಗರ ಪಾಲಿಕೆ ಪ್ರಗತಿ ಪರಿಶೀಲನೆ ಸಭೆಗೆ ಆಗಮಿಸಿದ್ದೇನೆ.
ಸ್ವಚ್ಛತೆಯ ಸೇವೆ ಅಭಿಯಾನದಡಿ ಬೀಚ್ ಸ್ವಚ್ಛಗೊಳಿಸಿದ್ದೇವೆ.ಸ್ವಚ್ಛತಾ ಪ್ರತಿಜ್ಞೆ ಬೋಧಿಸಿದ್ದೇನೆ ಎಂದರು.

ಮಂಗಳೂರಿನಲ್ಲಿ ನಾಳೆ ಸಂಪುಟ ಸಭೆ ಹಿನ್ನೆಲೆಯಲ್ಲಿ ಕೇಳಿದ ಪ್ರಶ್ನೆಗೆ ಮಂಗಳೂರಿನ ಅಭಿವೃದ್ಧಿಗೋಸ್ಕರ ಏನೇನು ಮಾಡಬೇಕು ಅದನ್ನ ಮಾಡುತ್ತೇವೆ ಎಂದವರು‌ ಉತ್ತರಿಸಿದರು.

ಮದ್ದೂರಿನಲ್ಲಿ ಗಣೇಶೋತ್ಸವಕ್ಕೆ ಮಸೀದಿ ಎದುರು ಪಟಾಕಿ ಸಿಡಿಸಿದ ವಿಚಾರಕ್ಕೆ ಸಂಬಂಧಿಸಿ‌ ಪ್ರತಿಕ್ರಿಯೆ ‌ನೀಡಿದ ಡಾ.ಯತೀಂದ್ರ
ಬಿಜೆಪಿಯವರಿಗೆ ದುರುದ್ದೇಶ ಇದೆ. ಎಲ್ಲಾ ಕಡೆ ಕೋಮುಗಲಭೆ ಮಾಡಬೇಕು ಎಂಬ ಇರಾದೆ ಅವರಿಗೆ ಇದ್ದಂತಿದೆ.
ರಾಜಕೀಯ ಲಾಭ ಪಡೆಯಬೇಕು ಎಂದು ಕೋಮುಗಲಭೆ ನಡೆಸಲು ಪ್ರಚೋದನೆ ಮಾಡುತ್ತಿದ್ದಾರೆ ಎಂದಾರೋಪಿಸಿದರು.

ಆದರೆ ಕರ್ನಾಟಕದಲ್ಲಿ ಬಾಲ ಬಿಚ್ಚೊದಕ್ಕೆ ನಾವು ಬಿಡೋದಿಲ್ಲ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಅವರು ಏನು ಬೇಕಾದರೂ ಮಾಡಲಿ ಆದರೆ ಕಾನೂನಿನಡಿಯಲ್ಲಿ ಮಾಡಲಿ ಎಂದರು.
ಬಂಟ್ವಾಳ ಅಬ್ದುಲ್ ರೆಹಮಾನ್ ಕೊಲೆ ಆರೋಪಿ ಭರತ್ ಕುಮ್ಡೆಲ್ ಗೆ ಜಾಮೀನು ವಿಚಾರ ಕ್ಕೆ ಸಂಬಂಧಿಸಿದ ಪ್ರಶ್ನೆಗೆ ಇದು ನಮ್ಮ ಸರಕಾರದ ವೈಫಲ್ಯವಲ್ಲ.
ಜಾಮೀನು ಕಾನೂನಿನಡಿ ಸಿಕ್ಕಿರುತ್ತದೆ ಎಂದರು.

ನಮ್ಮ ಸರಕಾರ ಅಪರಾಧಿಗಳಿಗೆ ಕಠಿಣ ಶಿಕ್ಷೆ ಕೊಡಲು ಪ್ರಯತ್ನಪಡುತ್ತದೆ. ನಮ್ಮ ಹೋರಾಟ ಅಪರಾಧಗಳ ವಿರುದ್ಧ ಮುಂದುವರೆಯುತ್ತದೆ ಎಂದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!