ಕುಂಬ್ರ ಜತ್ತಪ್ಪ ರೈ ಜೀವನಗಾಥೆಯ ತುಳು ಅನುವಾದ ಕೃತಿ ಬಿಡುಗಡೆ

ಮಂಗಳೂರು: ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು, ತುಳು ಅಧ್ಯಯನ ಪೀಠ ಮಂಗಳೂರು ,ಕುಂಬ್ರ ಜತ್ತಪ್ಪ ರೈ ಪ್ರತಿಷ್ಠಾನ ಪುತ್ತೂರು, ಮಂಗಳೂರು ವಿಶ್ವ ವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರ ಕುಂಬ್ರ ಜತ್ತಪ್ಪರೈಯವರ ಜೀವನದ ಬಗೆಗಿನ ಕೃತಿ ‘ಗಾಂಧಿ ಪಜ್ಜೆದ ಸಾದಿ ಪತ್ತೊಂದು’ ತುಳು ಭಾಷಾಂತರ ಪುಸ್ತಕದ ಬಿಡುಗಡೆ ಹಾಗೂ ವಿಚಾರ ಸಂಕಿರಣ ಗಾಂಧಿ ಮತ್ತು ವಿಶ್ವಶಾಂತಿ’ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಗರದ ವಿಶ್ವವಿದ್ಯಾ ನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಿತು.

ಮಹಾತ್ಮಾ ಗಾಂಧೀಜಿಯವರ ಮರಿಮಗ ಶ್ರೀಕೃಷ್ಣ ಗಜಾನನ ಕುಲಕರ್ಣಿ ಗಾಂಧಿ ಮತ್ತು ವಿಶ್ವಶಾಂತಿ’ ವಿಷಯದ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿ
ಮಹಾತ್ಮಾ ಗಾಂಧೀಜಿಯವರು ಮೂಲತಃ ಸತ್ಯವನ್ನು ಅನುಸರಿಸಲು ಬಯಸಿದ ಆಧ್ಯಾತ್ಮಿಕ ಸಾಧಕರಾಗಿದ್ದರು.
ಸನ್ನಿವೇಶಗಳು ಅವರನ್ನು ಸಾಮಾಜಿಕ ಮತ್ತು ರಾಜಕೀಯ ರಂಗಕ್ಕೆ ತಳ್ಳಿದವು. ಗಾಂಧೀಜಿಯವರ ಚಿಂತನೆಗಳು ಉಪನಿಷತ್ತುಗಳು, ವೇದಗಳು ಮತ್ತು ಭಗವದ್ಗೀತೆಯಲ್ಲಿ ಆಳವಾಗಿ ಬೇರೂರಿದ್ದವು. ಗೀತೆ ಅವರ ಆಧ್ಯಾತ್ಮಿಕ ತಾಯಿಯಾಗಿತ್ತು ಎಂದರು.

ಬೆಂಗಳೂರು ಇದರ ಕರ್ನಾಟಕ ಗಾಂಧಿ ಸ್ಮಾರಕನಿಧಿ ಅಧ್ಯಕ್ಷ ನಾಡೋಜ ಡಾ.ವೂಡೇ ಪಿ. ಕೃಷ್ಣ ಕಾರ್ಯಕ್ರಮ ವನ್ನು ಉದ್ಘಾಟಿಸಿ
ದಿಕ್ಚೂಚಿ ಭಾಷಣ ಮಾಡಿ ‘ ಸೇವೆ ಮತ್ತು ತ್ಯಾಗ, ಸತ್ಯ ಮತ್ತು ಅಹಿಂಸೆಯ ತತ್ವಗಳ ಮೇಲೆ ಭಾರತವನ್ನು ಸ್ವಾತಂತ್ರ ಹೋರಾಟಗಾರರು ಕಟ್ಟಿದರು. ಅವರ ಕನಸನ್ನು ನನಸು ಮಾಡಬೇಕಾಗಿರುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ನುಡಿದರು. ಮಹಾತ್ಮಾ ಗಾಂಧಿ ತಮ್ಮ ಬದುಕಿನಲ್ಲಿ ಮೂಲಭೂತವಾದಿಗಳ ವಿರುದ್ಧ , ಹಿಂಸೆಪ್ರತಿವಾದಿಗಳ ಮತ್ತು ಕೋಮವಾದಿಗಳ ವಿರುದ್ಧ ಹೋರಾಡಿದರು. ಭಾರತ ಇರುವವರೆಗೆ ಗಾಂಧಿ ಬೇಕು.ಗಾಂಧಿಯನ್ನು ಬಿಟ್ಟು ಭಾರತ ಇಲ್ಲ , ಗಾಂಧಿ ಬಿಟ್ಟು ಭಾರತ ಇಲ್ಲ. ಅವರ ಬದುಕೇ ಅವರ ಸಂದೇಶವಾಗಿದೆ .ಗಾಂಧಿಯನ್ನು ಅಧ್ಯಯನ ಮಾಡಿ, ಅರ್ಥಮಾಡಿಕೊಂಡರೆ ಭಾರತದ ಆತ್ಮವನ್ನು ಅರಿತುಕೊಂಡಂತೆ ಎಂದು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.

ವಿಶ್ರಾಂತ ಕುಲಪತಿ ಪ್ರೊ.ಬಿ.ಎ. ವಿವೇಕ ರೈ ಪುಸ್ತಕ ಬಿಡುಗಡೆ ಮಾಡಿದರು.ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ.ಪಿ.ಎಲ್.ಧರ್ಮ ಅಧ್ಯಕ್ಷತೆ ವಹಿಸಿದ್ದರು.

ಕುಪ್ಪ ಂ ದ್ರಾವಿಡಿಯನ್ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಲ್.ಸಿ. ಮಲ್ಲಯ್ಯ, ಮಂಗಳೂರು ಐಜಿಪಿ ಆರ್.ಚೇತನ್ , ಹಿರಿಯ ಗಾಂಧಿ ಚಿಂತಕ ಪ್ರೊ. ಜಿ. ಶಿವರಾಜ್ ಉಪಸ್ಥಿತರಿದ್ದರು.
ಪುತ್ತೂರಿನ ಕುಂಬ್ರ ಜತ್ತಪ್ಪ ರೈ ಪ್ರತಿಷ್ಠಾನ ಕಜೆಮಾರು ಸಂಸ್ಥಾಪಕ ಕೆ. ಪ್ರಮೋದ್ ಕುಮಾರ್ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಂಗಳೂರು ವಿವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಜಯವಂತ ನಾಯಕ್ ಸ್ವಾಗತಿಸಿದರು.ಮಂಗಳೂರು ವಿವಿ ಎನ್‌ಎನ್‌ಎಸ್ ಸಂಯೋಜನಾಧಿಕಾರಿ ಡಾ.ಶೇಷಪ್ಪ ಅಮಿನ್ ಕೆ ವಂದಿಸಿದರು. ಎಸ್‌ಡಿಎಂ ಕಾಲೇಜಿನ ಎನ್‌ಎಸ್ ಎಸ್ ಕಾರ್ಯದರ್ಶಿ ವಾರಿಣಿ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!