ಅಕ್ರಮವಾಗಿ ಕೆಂಪು ಕಲ್ಲು ಸಾಗಾಟ-ಲಾರಿ ವಶಕ್ಕೆ

ಮಂಗಳೂರು ದಕ್ಷಿಣ ಕನ್ನಡ: ಅಕ್ರಮವಾಗಿ ಕೆಂಪು ಕಲ್ಲನ್ನು ಸಾಗಾಟ ಮಾಡ್ತಿದ್ದ ಲಾರಿಯನ್ನು ವಶಪಡಿಸಿಕೊಂಡ ಘಟನೆ ಸುಳ್ಯ ಆಲೆಟ್ಟಿ ಗ್ರಾಮದ ನಾರ್ಕೊಡು ಎಂಬಲ್ಲಿ ನಿನ್ನೆ ನಡೆದಿದೆ. ಕಾನೂನು ಬಾಹಿರವಾಗಿ ಯಾವುದೇ ಪರವಾನಿಗೆ ಇಲ್ಲದೇ ಕೆಂಪು ಕಲ್ಲನ್ನು ಎಲ್ಲಿಂದಲೋ ಕದ್ದು ಸಾಗಾಟ ಮಾಡುತ್ತಿದ್ದಾಗ ಸುಳ್ಯ ಪೊಲೀಸರು ಪತ್ತೆ ಮಾಡಿ ಲಾರಿ ಹಾಗೂ ಚಾಲಕರನ್ನು ವಶಕ್ಕೆ ಪಡೆದು ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!