13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಪುತ್ತೂರಿನಲ್ಲಿ ಬಂಧನ

ಮಂಗಳೂರು ಮಹಿಳಾ ಪೊಲೀಸ್ ಠಾಣಾ ಅ.ಕ್ರ: 11/2013, ಕಲಂ:498A, 506 ಜೊತೆಗೆ 34 ಐಪಿಸಿ ಮತ್ತು 3, 4 ಡಿ.ಪಿ ಆಕ್ಟ್ ಪ್ರಕರಣದಲ್ಲಿ ಮಾನ್ಯ 3ನೇ JMFC ನ್ಯಾಯಾಲಯ ಮಂಗಳೂರು ಇಲ್ಲಿಯ CC No. 2312/2013 ಹಾಗೂ Split CC No. 2111/2018 ಮತ್ತು ಎಲ್.ಪಿ.ಸಿ ನಂ: 57/2023 ರಂತೆ ಮಾನ್ಯ ನ್ಯಾಯಾಲಯದಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿರುವ LPC ಪ್ರಕರಣವಾಗಿರುತ್ತದೆ.

ಸದರಿ ಆರೋಪಿಯ ಹಾಜರಾತಿಗಾಗಿ ಮಾನ್ಯ ನ್ಯಾಯಾಲಯವು ಸುಮಾರು 37 ಬಾರಿ ವಾರಂಟ್ ಹೊರಡಿಸಿದ್ದರೂ, ಕಳೆದ 13 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ, ವಿಳಾಸ ಬದಲಿಸಿ, ತಲೆ ಮರೆಸಿಕೊಂಡಿದ್ದ ಎಲ್‌ಪಿಸಿ ಆಸಾಮಿ ಹಸನ್ ಶಬೀರ್ ಪ್ರಾಯ: 41ವರ್ಷ, ತಂದೆ: ಅಬ್ದುಲ್ ಖಾದರ್, ವಾಸ: ಪಾರ್ಕ್ ಅಪಾರ್ಟ್ಮೆಂಟ್, ಕೆ.ಎಂ.ಸಿ ಆಸ್ಪತ್ರೆ ಹತ್ತಿರ, ಮಂಗಳೂರು ಎಂಬಾತನ್ನು ದಿನಾಂಕ: 09-10-2026 ರಂದು ಪುತ್ತೂರಿನ ಇನ್ ಲ್ಯಾಂಡ್ ಅಪಾರ್ಟ್ ಮೆಂಟ್ ನಲ್ಲಿ ವಶಕ್ಕೆ ಪಡೆದು ಠಾಣೆಗೆ ಬಂದಿದ್ದು, ಮಹಿಳಾ ಪೊಲೀಸ್ ಠಾಣೆಯ ಅ. ಕ್ರ: 45/2026, ಕಲಂ: 269 BNS ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ಸೂಕ್ತ ಭದ್ರಿಕೆಯಲ್ಲಿ ಮಾನ್ಯ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿರುತ್ತದೆ. ಮಾನ್ಯ ನ್ಯಾಯಾಲಯವು ದಿನಾಂಕ: 17-10-2026 ರವರೆಗೆ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿರುತ್ತದೆ. ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಮಹಿಳಾ ಪೊಲೀಸ್ ಠಾಣಾ WPSI ಜ್ಯೋತಿ PSI ಸುರೇಶ ಸಿಬ್ಬಂದಿಯವರಾದ ಶಶಿಧರ ಶೆಟ್ಟರ್ ಹಾಗೂ ಶಶಿದರ್ ದೊಡ್ಡಮನಿ ಸದರಿ ಆರೋಪಿಯ ಪತ್ತೆ ಕಾರ್ಯವನ್ನು ಕೈಗೊಂಡಿರುತ್ತಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!