ಕಾಸರಗೋಡು: ರಸ್ತೆ ಕಾಮಗಾರಿಗಾಗಿ ಸಂಗ್ರಹಿಸಿಡಲಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ 30 ಕಬ್ಬಿಣದ ಪೈಪ್ಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಖದೀಮರನ್ನು ಮೇಲ್ಪರಂಬ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಪಿಲಿಕ್ಕೋಡ್ ಎಚ್ಚಿಕೋವಲ್ ನಿವಾಸಿ ಪಿ.ವಿ. ಪ್ರಜಿಲ್ (33) ಹಾಗೂ ಅವರ ಸಹಚರ ಎಂದು ಗುರುತಿಸಲಾಗಿದೆ.
ಚೆರ್ಕಳ-ಕಾಲಿಕಡವ್ ರಸ್ತೆ ಅಭಿವೃದ್ಧಿ ಕಾಮಗಾರಿಯ ಗುತ್ತಿಗೆ ಪಡೆದಿರುವ ‘ಮೇಘಾ’ ಸಂಸ್ಥೆಯು ರಸ್ತೆಬದಿಯಲ್ಲಿ ಈ ಪೈಪ್ಗಳನ್ನು ಇರಿಸಿತ್ತು.

ಆರೋಪಿಗಳು ಮಿನಿ ಲಾರಿಯಲ್ಲಿ ಪೈಪ್ಗಳನ್ನು ಸಾಗಿಸಲು ಯತ್ನಿಸುತ್ತಿದ್ದಾಗ ಕೃತ್ಯ ಬೆಳಕಿಗೆ ಬಂದಿದೆ. ಸಂಸ್ಥೆಯ ಸೆಕ್ಯೂರಿಟಿ ಆಫೀಸರ್ ಪುಷ್ಪರಾಜನ್ ನೀಡಿದ ದೂರಿನನ್ವಯ ಎಸ್ಐ ಟಿ. ಅಖಿಲ್ ನೇತೃತ್ವದ ಪೊಲೀಸ್ ತಂಡವು ತಕ್ಷಣ ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ಬಂಧಿಸಿ, ಕಳವು ಮಾಡಿದ್ದ ಸ್ವತ್ತನ್ನು ವಶಪಡಿಸಿಕೊಂಡಿದೆ.


