ದೀನ ದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನಕ್ಕೆ ಚಾಲನೆ

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ ದ. ಕ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಬಂಟ್ವಾಳ ಕೃಷಿ ಇಲಾಖೆ ಬಂಟ್ವಾಳ ಗ್ರಾಮ ಪಂಚಾಯತ್ ಗೋಳ್ತಾಮಜಲು ಅಶ್ರಿವಾದ ಸಂಜೀವಿನಿ ಒಕ್ಕೂಟ ಗೊಳ್ತಾಮಾಜಲ್ ಇದರ ಸಹಯೋಗದಲ್ಲಿ ಹಡಿಲು ಬಿದ್ದ ಗದ್ದೆಯ ನೆಜಿ ನಾಟಿ ಕಾರ್ಯಕ್ರಮ ಗೊಳ್ತಾಮಜಲು ಗ್ರಾಮದ ಬಲ್ಕಟ್ಟ ಕೊಗ್ಗು ಪೂಜಾರಿಯವರ ಮನೆಯಲ್ಲಿ ನಡೆಯಿತು ಕಾರ್ಯಕ್ರಮವನ್ನು ತಾಲೂಕು ಪಂಚಾಯತ್ ಕಾರ್ಯನಿರ್ವಾಹನ ಅಧಿಕಾರಿ ಸಚಿನ್ ಕುಮಾರ್ ಹಾಗೂ ಜಿಲ್ಲಾ ಕೃಷಿ ಸಹಾಯಕ ನಿರ್ದೇಶಕರಾದ ಕುಮುದ ತೆ0ಗಿನ ಹೂ ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಬಳಿಕ ಮಾತನಾಡಿದ ತಾಪಂ.ಇ.ಒ.ಸಚಿನ್ ಅವರು ತಾಂತ್ರಿಕತೆಯ ಜೀವನದ ಮಧ್ಯೆ ಕೃಷಿ ಚಟುವಟುಕೆಗಳು ಮಾಯವಾಗಿದೆ. ಜಿಲ್ಲೆಯಲ್ಲಿ ಸಣ್ಣ ಸಣ್ಣ ಹಿಡುವಳಿದಾರರಿರುವುದರಿಂದ ಯಾಂತ್ರೀಕೃತ ಕೃಷಿ ಕೂಡ ಕಷ್ಟ ಸಾಧ್ಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಯುವಜನತೆ ಭತ್ತದ ಕೃಷಿ ವಿಚಾರದಲ್ಲಿ ಹೆಚ್ಚಿನ ಉತ್ಸುಕರಾಗಿದ್ದು,ಹಡಿಲು ಬಿದ್ದ ಗದ್ದೆಯಲ್ಲಿ ಭತ್ತದ ನಾಟಿ ಕಾರ್ಯಗಳು ನಡೆಯುತ್ತಿವೆ.ಇದರಿಂದ ಭೂಮಿಯಲ್ಲಿ ಅಂತರ್ಜಲ ಮಟ್ಟವನ್ನು ಸುಧಾರಿಸಲು ಸಾಧ್ಯವಿದೆ ಎಂದು ಅವರು ಹೇಳಿದರು

ಗ್ರಾ.ಪಂ.ಅಧ್ಯಕ್ಷೆ ಪ್ರೇಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ತಾಲೂಕ್ ಕೃಷಿ ಅಧಿಕಾರಿ ನಂದನ್ ಶೆಣೈ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಜಯಶಂಕರ್ ಆಳ್ವ NRLM ಅಭಿಮಾನದ ತಾಲೂಕು ವ್ಯವಸ್ಥಾಪಕರಾದ ಸುಧಾ,ಗದ್ದೆಯ ಮಾಲಕ ಕೊಗ್ಗು ಪೂಜಾರಿ ಕರುಣಾಕರ ಬಲ್ಕಟ್ಟ ಉಪಸ್ಥಿತರಿದ್ದರು ಕಾರ್ಯಕ್ರಮ ಸಂಜೀವಿನಿ ಅಭಿಮಾನದ ಸಿಬಂದಿಗಳು ಕೃಷಿ ಸಖಿ ಪಶು ಸಖಿ ಹಾಗೂ ಒಕೂಟ ದ ಪಧಿಕಾರಿಗಳು ಗಾಯತ್ರಿ ಅಳಿಕೆ ಪ್ರಾರ್ಥಿಸಿ ತಾಲೂಕು ಮೇಲ್ವಿಚಾರಕರು ಕುಸುಮ ಸ್ವಾಗತಿಸಿ mbk ಭವಾನಿ ವಂದಿಸಿ ಕೃಷಿ ಸಖಿ ಪುಷ್ಪವತಿ. ಪಿ ಕಾರ್ಯಕ್ರಮ ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!