ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯ ಸ್ಥಳ ಬದಲಾವಣೆ: ಹೊಸ ವಿಳಾಸ ಪ್ರಕಟ

ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯು ಈ ಹಿಂದೆ ಜಪ್ಪಿನಮೊಗೆರು, ರಾಷ್ಟ್ರೀಯ ಹೆದ್ದಾರಿ-66 ರ ಬಳಿಯ ವಾಹನ ಗ್ಯಾರೇಜ್ ಮಾಲಕರ ಸಂಘದ ಸಮೀಪದ ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು.


ಪ್ರಸ್ತುತ, ಠಾಣೆಯ ಕಾರ್ಯನಿರ್ವಹಣೆಗೆ ಅನುಕೂಲವಾಗುವಂತೆ ಈ ಕೆಳಕಂಡ ವಿಳಾಸದ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದ್ದು, ಪ್ರಸ್ತುತ ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಯು ಸದರಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ.

ಠಾಣೆಯ ವಿಳಾಸ:
ಡೋರ್ ನಂ. 5-78, ಪುಷ್ಪ ನಿವಾಸ”
ಶ್ರೀ ಕೃಷ್ಣ ಕಲ್ಯಾಣ ಮಂಟಪದ ಎದುರುಗಡೆ,
ಸಂಕೋಳಿಗೆ, ಕೋಟೆಕಾರ್ ಗ್ರಾಮ,
ಉಳ್ಳಾಲ ತಾಲೂಕು -575023
ದೂರವಾಣಿ ಸಂಖ್ಯೆ: 0824-2220850
ಮೊ.ಸಂ 9480805371
Google Map Location : https://maps.app.goo.gl/38Mscz54ZL6AHXfJ9

ಮಂಗಳೂರು ಸಂಚಾರ ದಕ್ಷಿಣ ಪೊಲೀಸ್ ಠಾಣೆಗೆ ಸಂಬಂಧಿಸಿದ ದೂರುಗಳು ಹಾಗೂ ಇತರ ಪೊಲೀಸ್ ಸೇವೆಗಳಿಗಾಗಿ ಸಾರ್ವಜನಿಕರು ಇನ್ನು ಮುಂದೆ ಹೊಸ ವಿಳಾಸವನ್ನು ಸಂಪರ್ಕಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!