
ಉಳ್ಳಾಲ:ಸಹಕಾರ ಭಾರತಿಯ ಉಳ್ಳಾಲ ತಾಲೂಕು ಸಮಿತಿಯ ನೂತನ ಮಹಿಳಾ ಪ್ರಮುಖ್ ಆಗಿ ದಿನಮಣಿ ರಾವ್ ಅವರು ಮಹತ್ವದ ಜವಾಬ್ದಾರಿ ವಹಿಸಿಕೊಂಡರು.

ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಭಾರತಿಯ ಅಧ್ಯಕ್ಷ ಸುಧಾಕರ್ ರೈ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 19 ಸದಸ್ಯರನ್ನು ಒಳಗೊಂಡ ಉಳ್ಳಾಲ ತಾಲೂಕು ಸಮಿತಿಯನ್ನು ಪೂರ್ಣ ಪ್ರಮಾಣದಲ್ಲಿ ರಚಿಸಲಾಯಿತು. ಈ ಸಂದರ್ಭದಲ್ಲಿ ದಿನಮಣಿ ರಾವ್ ಅವರು ಮಹಿಳಾ ಪ್ರಮುಖ್ ಆಗಿ ಅಧಿಕಾರ ಸ್ವೀಕರಿಸಿದರು.

ಪದಗ್ರಹಣ ಕಾರ್ಯಕ್ರಮದಲ್ಲಿ ಸಹಕಾರ ಭಾರತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್ ಅವರು ಸಂಘಟನೆಯ ಬೆಳವಣಿಗೆ ಹಾಗೂ ಮಹಿಳಾ ಪ್ರಮುಖರ ಜವಾಬ್ದಾರಿಗಳ ಕುರಿತು ಮಾಹಿತಿ ನೀಡಿ, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಹಕಾರ ಭಾರತಿಯ ಉಪಾಧ್ಯಕ್ಷರಾದ ಕೆ.ವಿ. ಪ್ರಸಾದ್, ವಿಶ್ವನಾಥ್ ಹಾಗೂ ಕೋಶಾಧಿಕಾರಿ ಸುಬ್ರಹ್ಮಣ್ಯ ಭಟ್ ಉಪಸ್ಥಿತರಿದ್ದರು.

