ಗಿನ್ನೆಸ್ ದಾಖಲೆ ಸೇರಿದ ಮಂಗಳೂರಿನ ಸಮೂಹ ಗಾಯನ: 11 ದಿನ, 11 ಗಂಟೆ, 11 ನಿಮಿಷಗಳ ಸಂಗೀತ ಮ್ಯಾರಥಾನ್ ಯಶಸ್ವಿ

ಮಂಗಳೂರು :ಮಾಂಡ್ ಸೊಭಾಣ್ ನೇತೃತ್ವದಲ್ಲಿ ಮಂಗಳೂರಿನ ಪುರಭವನದಲ್ಲಿ ಕಳೆದೊಂದು ವಾರದಿಂದ ನಡೆಯುತ್ತಿರುವ ಸಮೂಹ ಗಾಯನ ಕಾರ್ಯಕ್ರಮವು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ತನ್ನದಾಗಿಸಿಕೊಳ್ಳುವ ಮೂಲಕ ಇಂದು ಸಮಾಪನಗೊಂಡಿತು.

ಅತೀ ದೀರ್ಘಾವಧಿಯ ಈ ಸಮೂಹಗಾಯನವು ಹನ್ನೊಂದು ದಿನ, ಹನ್ನೊಂದು ಗಂಟೆ ಹಾಗೂ ಹನ್ನೊಂದು ನಿಮಿಷಗಳನ್ನ ಪೂರ್ಣಗೊಳಿಸುವುದರೊಂದಿಗೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಹೆಸರು ದಾಖಲಿಸಿಕೊಂಡಿದೆ.

ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ. ಪಿಂಟೊ ಹಾಗೂ ಇತರ ಸಂಘಟಕರು ಹರ್ಷೋದ್ಗಾರದೊಂದಿಗೆ ವಿಶ್ವ ದಾಖಲೆಯನ್ನು ಸಂಭ್ರಮಿಸಿದರು. ಈ ಹಿಂದೆ 2024ರಲ್ಲಿ ವಡ್ತಾಲ್‌ನಲ್ಲಿ ಹರಿಕೃಷ್ಣ ಕೀರ್ತನ್ ಯಾಗ್ ಸಂಸ್ಥೆಯು ನಿರ್ಮಿಸಿದ್ದ 11 ದಿನಗಳು, 11 ಗಂಟೆಗಳು, 11 ನಿಮಿಷಗಳ (275 ಗಂಟೆಗಳು ಮತ್ತು 11 ನಿಮಿಷಗಳು) ಹಿಂದಿನ ಮೈಲಿಗಲ್ಲನ್ನು ಮಾಂಡ್ ಸೊಭಾಣ್ ಸಂಗೀತ ಮ್ಯಾರಥಾನ್ ಮೀರಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!