ಗುಡಿ ಕೈಗಾರಿಕೆ, ಗೃಹ ಉತ್ಪನ್ನಗಳ ಕಿರು ಉದ್ಯಮಿಗಳನ್ನು ಪ್ರೋತ್ಸಾಹಿಸಿ – ಶಾಸಕ ವೇದವ್ಯಾಸ ಕಾಮತ್

ಮಂಗಳೂರು :ವೋಕಲ್ ಫಾರ್ ಲೋಕಲ್ ತತ್ವದಡಿ, ಕಿರು ಉದ್ಯಮಿಗಳ ಗುಡಿ ಕೈಗಾರಿಕೆ, ಗೃಹ ಉತ್ಪನ್ನಗಳನ್ನು ಖರೀದಿಸಿ ಅವರನ್ನು ಪ್ರೋತ್ಸಾಹಿಸಿ, ಸಪ್ತಾಹದ ಸಂತೆಯನ್ನು ಯಶಸ್ವಿಗೊಳಿಸಬೇಕಾಗಿ ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ಸೋಮವಾರ ಮಂಗಳೂರಿನ ವಿ.ಟಿ.ರಸ್ತೆಯ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಎಸ್ ಸಿಡಿಸಿಸಿ ಬ್ಯಾಂಕ್ ಪ್ರಾಯೋಜಕತ್ವದಲ್ಲಿ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಸಹಕಾರದಲ್ಲಿ ಶ್ರೀ ವಿಠೋಭ ರುಕುಮಾಯಿ ದೇವಸ್ಥಾನದ ಆಶ್ರಯದಲ್ಲಿ ಅಖಂಡ ಭಜನಾ ಸಪ್ತಾಹದ ಅಂಗವಾಗಿ ಆಯೋಜಿಸಲಾಗಿರುವ ಸಪ್ತಾ ಸಾಂತ್ ಉದ್ಘಾಟಿಸಿ ಅವರು ಮಾತನಾಡಿರು.

ಶ್ರೀ ವಿಠೋಭ ರುಕುಮಾಯಿ ದೇವಳದ 104 ನೇ ವರ್ಷದ ಅಖಂಡ ಭಜನಾ ಸಪ್ತಾಹದ ದಿನಗಳಲ್ಲಿ ಹಿಂದಿನ ಕಾಲದಲ್ಲಿ ವಿ.ಟಿ.ರಸ್ತೆಯಲ್ಲಿ ರಸ್ತೆಬದಿಯಲ್ಲಿ ಸಂತೆ ವಿಜೃಂಭಣೆಯಿಂದ ನಡೆಯುತ್ತಿತ್ತು. ಈಗ ವಾಹನಗಳ ದಟ್ಟಣೆಯಿಂದ ಅದನ್ನು ಸಭಾಂಗಣದಲ್ಲಿ ನಡೆಸಿಕೊಂಡು ಬರುವ ಅನಿವಾರ್ಯತೆ ಇದೆ. ಪ್ರತಿವರ್ಷದಂತೆ ಈ ಬಾರಿಯೂ ಈ ಸಪ್ತಾ ಸಾಂತ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಉದ್ಯಮಿಗಳಾಗಿ ಭಾಗವಹಿಸಿದ್ದು, ಅವರು ಮನೆಯಲ್ಲಿ ತಯಾರಿಸಿದ ಆಹಾರ ವಸ್ತುಗಳು, ಬಟ್ಟೆಗಳು ಹಾಗೂ ವಿವಿಧ ಅಲಂಕಾರಿಕ ವಸ್ತುಗಳು ಆಕರ್ಷಕವಾಗಿದ್ದು, ಪ್ರತಿ ವರ್ಷ ಇದಕ್ಕೆ ದೊರೆಯುತ್ತಿರುವ ಉತ್ತಮ ಪ್ರತಿಕ್ರಿಯೆಯಿಂದಾಗಿ ಉದ್ಯಮಿಗಳಿಗೂ, ಗ್ರಾಹಕರಿಗೂ ತುಂಬಾ ಅನುಕೂಲವಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ ಹನುಮಂತ ಕಾಮತ್, ಟ್ರಸ್ಟಿ ವಿಠೋಭ ಶೆಣೈ, ಪ್ರಮುಖರಾದ ನಾಗೇಶ್ ಪ್ರಭು ಉಪಸ್ಥಿತರಿದ್ದರು. ಈ ಸಂತೆ ಪ್ರತಿ ದಿನ ಬೆಳಿಗ್ಗೆ 9.30 ರಿಂದ ರಾತ್ರಿ 8 ಗಂಟೆಯ ತನಕ ತೆರೆದಿರುತ್ತಿದ್ದು, ನವೆಂಬರ್ 21 ರ ರಾತ್ರಿ 8 ಗಂಟೆಯ ತನಕ ನಡೆಯಲಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!