ತಲೇಕ್ಕಳ ಮದಂಗಲ್ಲು ಶ್ರೀ ಧೂಮಾವತಿ ದೈವಸ್ಥಾನದಲ್ಲಿ ಕಳ್ಳತನ

ಮಂಜೇಶ್ವರ : ಮೀಯಪದವು ಸಮೀಪದ ತಲೇಕ್ಕಳ ಮದಂಗಲ್ಲು ಶ್ರೀ ಧೂಮಾವತಿ ದೈವಸ್ಥಾನದಲ್ಲಿ ಕಳ್ಳತನ ನಡೆದಿದ್ದು, ಸುಮಾರು ಎರಡೂವರೆ ಲಕ್ಷ ರೂಪಾಯಿ ಮೌಲ್ಯದ ತಾಮ್ರದ ವಸ್ತುಗಳು ಕಳುವಾಗಿವೆ.

ದೈವಸ್ಥಾನದ ಕಚೇರಿ ಹಾಗೂ ಸ್ಟೋರ್‌ರೂಮ್‌ನ ಬೀಗ ಮುರಿದು ಒಳನುಗ್ಗಿದ ಕಳ್ಳರು, ಒಳಗೆಯಿದ್ದ ತಾಮ್ರದ ಕೊಪ್ಪರಿಗೆಗಳು, ದೀಪಗಳು ಮತ್ತು ಇತರೆ ಪೂಜಾ ಪಾತ್ರೆಗಳನ್ನು ದೋಚಿದ್ದಾರೆ.

​ನವೆಂಬರ್ 1ರ ಸಂಜೆಯಿಂದ 9ರ ಬೆಳಿಗ್ಗೆ 11ರ ನಡುವೆ ಈ ಕೃತ್ಯ ನಡೆದಿರುವುದಾಗಿ ಶಂಕಿಸಲಾಗಿದೆ. ದೀಪಾವಳಿ ಕಾರ್ಯಕ್ರಮಕ್ಕೆಂದು ಬಂದಾಗ ಈ ಕಳವು ಬೆಳಕಿಗೆ ಬಂದಿದೆ.

ದೈವಸ್ಥಾನದ ಅಧ್ಯಕ್ಷ ಕೃಷ್ಣ ಪ್ರಸಾದ್ ಅವರು ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!