ಮಂಗಳೂರಿನ ಪತ್ರಕರ್ತರಾದ ರೋನ್ಸ್ ಬಂಟ್ವಾಳ, ರಾಜೇಶ್ ದಡ್ಡಂಗಡಿ, ಶಂಶೀರ್ ಬುಡೋಳಿಯವರಿಗೆ ‘ಕೇರಳ – ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ’

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಕಾಸರಗೋಡು ಇದರ ನೇತೃತ್ವದಲ್ಲಿ ಈ ವರ್ಷ ನಡೆಯಲಿರುವ ಕೇರಳ ರಾಜ್ಯ ‌8 ನೇ ಕನ್ನಡ ಸಮ್ಮೇಳನ 2026, ಕೇರಳ ಕರ್ನಾಟಕ ಉತ್ಸವ ಇದರ ಪ್ರತಿಷ್ಟಿತ “ಕೇರಳ – ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ” ಗೆ ಮಂಗಳೂರು ಮೂಲದ ಹಿರಿಯ ಪತ್ರಕರ್ತರಾದ ರೋನ್ಸ್ ಬಂಟ್ವಾಳ, ಡಿಡಿ ದೂರದರ್ಶನ ವರದಿಗಾರ ರಾಜೇಶ್ ದಡ್ಡಂಗಡಿ ಹಾಗೂ ಪತ್ರಕರ್ತ, ಕವಿ, ಸಾಹಿತಿ, ನ್ಯೂಸ್ ಆ್ಯಂಕರ್, ಪಿಎಚ್ ಡಿ ಸ್ಕಾಲರ್ ಶಂಶೀರ್ ಬುಡೋಳಿ ಆಯ್ಕೆಯಾಗಿದ್ದಾರೆ ಎಂದು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಕನ್ನಡ ಗ್ರಾಮ, ಕಾಸರಗೋಡು ಇದರ ಅಧ್ಯಕ್ಷ ಶಿವರಾಮ ಕಾಸರಗೋಡು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಸರಗೋಡು ಕನ್ನಡ ಗ್ರಾಮದಲ್ಲಿ 2026 ರ ನವೆಂಬರ್ 28 ಮತ್ತು 29ರಂದು ಎರಡು ದಿನಗಳ ಕಾಲ ನಡೆಯುವ ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ – 2026, ಕೇರಳ-ಕರ್ನಾಟಕ ಉತ್ಸವ, ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಉತ್ಸವ, ಕೇರಳ – ಕರ್ನಾಟಕ ಭವನದ ಭೂಮಿಪೂಜೆ, ಶಿಲಾನ್ಯಾಸ ಸಮಾರಂಭವು 2026 ನವಂಬರ್ 28 ಶನಿವಾರದಂದು ಬೆಳಿಗ್ಗೆ ಗಂಟೆ 10ಕ್ಕೆ ನಡೆಯಲಿದೆ. ನವೆಂಬರ್ 29 ರ ಆದಿತ್ಯವಾರದಂದು ಮಧ್ಯಾಹ್ನ 3ಕ್ಕೆ ನಡೆಯುವ ಸಮಾರೋಪ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರತಿಷ್ಠಿತ ಕೇರಳ-ಕರ್ನಾಟಕ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!