ಮಂಗಳೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಪ್ರತಿಷ್ಠಾನವು ಪ್ರತಾಪನಗರದ ಕೇಶವ ಸ್ಮೃತಿ ಸಂವರ್ಧನ ಸಮಿತಿಯೊಂದಿಗೆ ಜಂಟಿಯಾಗಿ ಒಂದು ದಿನದ ಯೋಗಾಸನ ಪ್ರದರ್ಶನದ ಯೋಗೋತ್ಸವ “ಯೋಗ ಏಕಾಹ 2025” ಕಾರ್ಯಕ್ರಮವನ್ನು ಸೆಪ್ಟೆಂಬರ್ ೨೧ ರಂದು ಸಂಘನಿಕೇತನ ಪ್ರತಾಪ ನಗರದಲ್ಲಿ ನಡೆಯಲಿದೆ ಎಂದು ಕಾರ್ಯದರ್ಶಿ ಧನಂಜಯ ಕೆ ತಿಳಿಸಿದರು.
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ಈ ಕಾರ್ಯಕ್ರಮದಲ್ಲಿ ಜಿಲ್ಲೆಯ 10 ಪ್ರತಿಷ್ಠಿತ ಯೋಗಾಭ್ಯಾಸವನ್ನು ಕಲಿಸುವ ಸಂಸ್ಥೆಗಳು ಇದರಲ್ಲಿ ಪಾಲ್ಗೊಳ್ಳಲಿದೆ . ಪ್ರತೀ ಸಂಸ್ಥೆಯ ತಂಡವು 30 ನಿಮಿಷಗಳ ಕಾಲ ವಿವಿಧ ಯೋಗಾಸನಗಳನ್ನು ಪ್ರದರ್ಶಿಸಲಿದೆ . ಅಂತೆಯೇ, 8 ಮಂದಿ ನುರಿತ ಹಾಗೂ ಹಲವು ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿದ ಯೋಗ ಪಟುಗಳು ವೈಯಕ್ತಿಕ ಯೋಗಾಸನ ಪ್ರದರ್ಶನವನ್ನು ಮಾಡಲಿದ್ದಾರೆ ಎಂದರು .
ಅಧ್ಯಕ್ಷರಾದ ಏಕನಾಥ ಬಾಳಿಗಾ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿ ,ಕಾರ್ಯಕ್ರಮವು ಬೆಳಿಗ್ಗೆ 6.00ರಿಂದ ಸಂಜೆ 6.00ರ ತನಕ ನಡೆಯಲಿರುವುದು . ಕಾರ್ಯಕ್ರಮವಕ್ಕೆ ಮುಖ್ಯ ಅಥಿತಿಗಳಾಗಿ ಶ್ರೀ ಕೊಂಡೆವೂರು ಮಠದ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಗಳು ಹಾಗು ಮಂಗಳೂರು ಉತ್ತರ ರೋಟರಿ ಕ್ಲಬ್ ನ ಅಧ್ಯಕ್ಷರಾದ ಡಾ ಎಂ ಎಸ್ ಅರುಣ್ ಕುಮಾರ್ ಶೆಟ್ಟಿ ಭಾಗವಹಿಸಲಿರುವರು .
ಈ ಸಮಾರಂಭವು ಸ್ಪರ್ಧಾತ್ಮಕವಾಗಿರದೆ ಉತ್ಕೃಷ್ಟ ಮಟ್ಟದ ಹಾಗೂ ಕೇವಲ ಪ್ರದರ್ಶನದ ಮಹತ್ವಹೊಂದಿರುತ್ತದೆ.
ಪ್ರತಿಷ್ಠಾನವು ಈ ವಿನೂತನ ಕಾರ್ಯಕ್ರಮವನ್ನು 2023ರಿಂದ ನಡೆಸಿಕೊಂಡು ಬರುತ್ತಿದೆ. ವಿವಿಧ ಸಂಸ್ಥೆಗಳು ಒಂದೇ ವೇದಿಕೆಯ ಮೇಲೆ ಪ್ರದರ್ಶನಾತ್ಮಕವಾಗಿ ಆಸನಗಳನ್ನು ಮಾಡಿತೋರಿಸಲಿದ್ದಾರೆ. ಅದಲ್ಲದೆ, ಹೆಚ್ಚು ಜನರಿಗೆ ಈ ಮೂಲಕ ಯೋಗಾಭ್ಯಾಸದಲ್ಲಿ ಆಸಕ್ತಿ ಮೂಡುವಂತೆ ಮಾಡುವುದು ನಮ್ಮ ಉದ್ದೇಶ.
ಸುಮಾರು 175-200 ಮಂದಿ ಯೋಗಪಟುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದ್ದು ಮಂಗಳೂರಿನ ಎಲ್ಲಾ ಯೋಗ ಪಟುಗಳನ್ನು ಒಂದೇ ವೇದಿಕೆಗೆ ತರುವ ಪ್ರಯತ್ನ ಇದಾಗಿದೆ ಎಂದರು.ಸುದ್ದಿಗೋಷ್ಠಿಯಲ್ಲಿ , ಜಯಲಕ್ಷ್ಮಿ ಚಂದ್ರಹಾಸ ,ಪ್ರಭಾ ಚಂದ್ರಶೇಖರ , ಅರುಣ್ ಕುಮಾರ್ ಮುಂತಾದವರು ಉಪಸ್ಥಿತತರಿದ್ದರು .