ಮಂಗಳೂರು:ಗ್ರಾಂಡ್ ರಾವ್ಸ್ ಚೆಸ್ಸ್ ಕಾರ್ನರ್ ವತಿಯಿಂದ ಅಂತರಾಷ್ಟ್ರೀಯ ಫಿಡೆ ರೇಟೆಡ್ ಚೆಸ್ ಫೆಸ್ಟಿವಲ್ ಪಂದ್ಯಕೂಟವು ಸೆಪ್ಟೆಂಬರ್ 25 ರಿಂದ 30 ರ ತನಕ ಮಂಗಳೂರಿನ ಶಾರದಾ ವಿದ್ಯಾಲಯದ ಭುವರಹ ಅಟ್ರಿಯಂ ನಲ್ಲಿ ನಡೆಯಲಿದೆ ಎಂದು ಆರ್.ಸಿ.ಸಿ ಸಂಸ್ಥೆಯ ಸಲಹೆಗಾರರು ಹಾಗೂ ಸಂಘಟಕರೂ ಆಗಿರುವ ಡಾ ಶುಭಾನಂದ್ ರಾವ್ ತಿಳಿಸಿದರು.
ಅವರು ಪತ್ರಿಕಾಭವನದಲ್ಲಿ ನಡೆದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಆರ್ ಸಿ ಸಿ ಯನ್ನು 2012 ರಲ್ಲಿ ಐ ಎಂ ಶರಣ್ ರಾವ್ ಮತ್ತು ಡ ಬ್ಲ್ಯೂ ಐ ಎಂ ಇಶಾ ಶರ್ಮಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಾಪಿಸುತ್ತಾರೆ . ಇದು ಬಿಜೈ ಮತ್ತು ಲೇಡಿಹಿಲ್ ಶಾಖೆಗಳೊಂದಿಗೆ RCC ಶಾಲೆಗಳಲ್ಲೂ ಚೆಸ್ ಬೋಧನೆ ಮಾಡುವ ಜೊತೆಗೆ ಆನ್‌ಲೈನ್ ಕ್ಲಾಸುಗಳೊಂದಿಗೆ ಪ್ರತಿ ತಿಂಗಳು ಸುಮಾರು ೩೫೦ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಮತ್ತು ಸಂಸ್ಥೆಯು ನಿಯಮಿತವಾಗಿ ಟೂರ್ನಮೆಂಟ್‌ಗಳನ್ನು ಆಯೋಜಿಸುತ್ತಿದೆ.
ಐ ಎಂ ಶರಣ್ ರಾವ್ ಮಾತನಾಡಿ , ಕ್ಲಾಸಿಕಲ್, ರಾಪಿಡ್ ಮತ್ತು ಬಿಟ್ಸ್ ಟೂರ್ನಮೆಂಟ್‌ಗಳು ಸೇರಿ, ಒಟ್ಟು 31 ರೌಂಡ್ ನಲ್ಲಿ ಈ ಆಟವು ನಡೆಯಲಿದೆ . ದೇಶ-ವಿದೇಶಗಳಿಂದ ಸುಮಾರು 400 ಸ್ಪರ್ಧಿಗಳು ಭಾಗವಹಿಸುವ ಸಾಧ್ಯತೆ ಇದೆ . 10 ಡಿಜಿಟಿ ಬೋರ್ಡ್‌ಗಳು ಅಳವಡಿಸಲ್ಪಟ್ಟಿದ್ದು ಅಂತರಾಷ್ಟ್ರೀಯ ಮಟ್ಟದ ವಾತಾವರಣವನ್ನು ಸೃಷ್ಟಿಸಲಿದೆ . ವಿದೇಶಗಳಿಂದಲೂ ಈ ಚೆಸ್ ಸ್ಪರ್ಧೆಗೆ ಭಾಗವಹಿಸಲಿದ್ದಾರೆ . ಮಂಗಳೂರಿನಲ್ಲಿ ಇತಿಹಾಸದ ಮೊದಲ ಬಾರಿಗೆ ಇಷ್ಟು ದೊಡ್ಡ ಚೆಸ್ ಉತ್ಸವ ನಡೆಯುತ್ತಿದ್ದು ಈ ಜಿಲ್ಲೆಗೆ ಸಾಕಷ್ಟು ಕೊಡುಗೆಯನ್ನು ನೀಡಲಿದೆ .
ಸುದ್ದಿಗೋಷ್ಠಿಯಲ್ಲಿ ಸುಧಾಕರ್ ರಾವ್ , ರಮೇಶ್ ಕೋಟೆ , ಡ ಬ್ಲ್ಯೂ ಐ ಎಂ ಇಶಾ ಶರ್ಮಾ ಉಪಸ್ಥಿತತರಿದ್ದರು .