ಹುಟ್ಟಿನ ಸಾರ್ಥಕತೆ ಮೆರೆಯುವ ರೀತಿಯಲ್ಲಿ ಹುಟ್ಟು ಹಬ್ಬವನ್ನ ಆಚರಿಸಿದ ಲಂಚುಲಾಲ್.

ಅಸ್ತ್ರ ಗ್ರೂಪ್ CEO, ಸಿನೆಮಾ ನಟ,ನಿರ್ಮಾಪಕ, CATCA ದ ಅಧ್ಯಕ್ಷ ಕೊಡುಗೈ ದಾನಿ ಲಂಚು ಲಾಲ್ ಅವರು ಹತ್ತು ಹಲವು ಸಮಾಜಮುಖಿ ಚಟುವಟಿಕೆಗಳನ್ನು ಮಾಡುವ ಮೂಲಕ ಜನಪ್ರಿಯತೆ ಪಡೆದಿದ್ದು ,ಇವರು ತಮ್ಮ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುವ ಮೂಲಕ ಮತ್ತೆ ಎಲ್ಲರ ಗಮನ ಸೆಳೆದಿದ್ದಾರೆ.

ತೊಕ್ಕೋಟು ಸಮೀಪದ ಗಟ್ಟಿ ಸಮಾಜ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಳ್ಳಾಲ, ತೊಕ್ಕೊಟ್ಟು ಪರಿಸರದ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಸ್ಕೂಲ್ ಬ್ಯಾಗ್, ಅಕ್ಕಿ, ಹಾಗೂ ದಿನಸಿ ಕಿಟ್ ನೀಡುವ ಮೂಲಕ ವಿಶೇಷವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿದರು. ಕಾರ್ಯಕ್ರಮದಲ್ಲಿ 1000 ಕ್ಕೂ ಅಧಿಕ ವಿದ್ಯಾರ್ಥಿಗಳು ಸದುಪಯೋಗವನ್ನು ಪಡೆದುಕೊಂಡಿದ್ದು ಅಸ್ತ್ರ ಗ್ರೂಪ್ ವ್ಯವಸ್ಥಾಪಕರು, ಎ. ಬಿ. ಸಿ ತೊಕ್ಕೊಟ್ಟು ಇದರ ಸದಸ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ವೇದಿಕೆಯಲ್ಲಿ ಇತ್ತೀಚಿಗೆ ಗಾಳಿ ಮಳೆಯಿಂದ ತಮ್ಮ ಮನೆಯನ್ನು ಕಳೆದುಕೊಂಡ ಕುಟುಂಬಕ್ಕೆ ಮನೆಯ ರಿಪೇರಿಯ ಸಂಪೂರ್ಣ ಖರ್ಚನ್ನು ತಾನು ವಹಿಸಿಕೊಳ್ಳುವುದಾಗಿ ಭರವಸೆ ನೀಡಿದರು. ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು, ಲಂಚು ಲಾಲ್ ಅವರ ಅಭಿಮಾನಿಗಳು ಕಾರ್ಯಕ್ರಮಕ್ಕೆ ಬಂದು ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಲಂಚು ಲಾಲ್ ಅವರು ‘ ನನ್ನ ಮೈಮೇಲೆ ಚಿನ್ನ ಬೇಕಾದಷ್ಟಿದೆ ಆದರೆ ಅದು ಯಾವತ್ತೂ ಕೂಡ ಶೋಕಿಗಲ್ಲ. ಸಹಾಯ ಕೇಳಲು ಯಾರಾದರೂ ನನ್ನ ಬಳಿ ಬರುವ ಸಂದರ್ಭದಲ್ಲಿ ನನ್ನ ಮೈಮೇಲೆ ಇರುವ ಚಿನ್ನವನ್ನು ನಾನೇ ಒಮ್ಮೆ ನೋಡಿಕೊಂಡು ನನಗೆ ನಾನೇ ಧೈರ್ಯ ತುಂಬುತ್ತೇನೆ.. ಇದು ನನ್ನ ಆತ್ಮಸ್ಥೈರ್ಯ, ಬಸ್ಸಿನಲ್ಲಿ ಸಂಚಾರಿಸಲು 6 ರೂಪಾಯಿ ಕೈಯಲ್ಲಿ ಇಲ್ಲದೆ ಇದ್ದ ದಿನಗಳಿದ್ದವು ನನ್ನ ಸ್ವ ಪರಿಶ್ರಮದಿಂದ ಇಲ್ಲಿ ತನಕ ಬಂದಿದ್ದೇನೇ ನಿಮಗೂ ನನ್ನ ಕಿವಿಮಾತು ಕೂಡ ಅದೇ ಪರಿಶ್ರಮದಿಂದ ಗೆಲುವು ಖಂಡಿತ ಎಂದರು. ಕಾರ್ಯಕ್ರಮವನ್ನು ವಿ.ಜೆ ಮಧುರಾಜ್ ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!