ಅಕ್ರಮ ಕಸಾಯಿಖಾನೆ ನಡೆಸಿದ ಆರೋಪದಲ್ಲಿ ಆರೋಪಿಯ ಮನೆ/ಕಸಾಯಿ ಖಾನೆಯ ಮುಟ್ಟುಗೋಲು

ಮಂಗಳೂರು:ಬಂಟ್ವಾಳ : ಅಕ್ರಮ ಕಸಾಯಿಖಾನೆ ನಡೆಸಿದ ಆರೋಪದಲ್ಲಿ ಆರೋಪಿಯ ಮನೆ/ಕಸಾಯಿ ಖಾನೆಯನ್ನು ಮುಟ್ಟುಗೋಲು ಹಾಕಿದ ಪ್ರಕರಣ ವರದಿಯಾಗಿದೆ. ದ.ಕ. ಜಿಲ್ಲೆಯಲ್ಲಿ ಮೊಟ್ಟ ಮೊದಲ ಪ್ರಕರಣ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಾರಿಪಳ್ಳ ಸಮೀಪದ ಪಾಡಿ ಎಂಬಲ್ಲಿ ನಡೆದಿದೆ.

ಪುದು ಗ್ರಾಮದ ಪಾಡಿ ನಿವಾಸಿ ಹಸನಬ್ಬಗೆ ಸೇರಿದ ಮನೆಯನ್ನು ಅಕ್ರಮ ಕಸಾಯಿ ಖಾನೆ ನಡೆಸಿದ ಆರೋಪದಲ್ಲಿ ಜಪ್ತಿ ಮಾಡಿ ಸರಕಾರದ ವಶಕ್ಕೆ ಪಡೆಯಲಾಗಿದೆ.ಹಸನಬ್ಬ ವಿರುದ್ಧ ಗೋ ಕಳವು, ಗೋವಧೆಯಂತಹ ಪ್ರಕರಣಗಳು ದಾಖಲಾಗಿವೆ. ಗೋಹತ್ಯೆ ನಿಷೇಧ ಕಾಯಿದೆಯಡಿ ದಾಖಲಾದ ಪ್ರಕರಣದಲ್ಲಿ ದಸ್ತಗಿರಿ ಮಾಡಿ ಎಸಿಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಈತನ ಕಸಾಯಿಖಾನೆಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸಹಾಯಕ ಆಯುಕ್ತರು ಹಾಗೂ ಉಪವಿಭಾಗೀಯ ದಂಡಾಧಿಕಾರಿಗಳಿಗೆ ಪೊಲೀಸರು ವರದಿ ಸಲ್ಲಿಸಿದ್ದರು.ಪೊಲೀಸರ ಮನವಿಯಂತೆ ಸಹಾಯಕ ಆಯುಕ್ತರು ಹಾಗೂ ಉಪ ವಿಭಾಗೀಯ ದಂಡಾಧಿಕಾರಿಗಳು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ-2020 ಅಡಿಯಲ್ಲಿ ಹಸನಬ್ಬನ ವಶದಲ್ಲಿರುವ ಮಾರಿಪಳ್ಳ ಪಾಡಿ ಎಂಬಲ್ಲಿರುವ ಮನೆ ಹಾಗು ಅಕ್ರಮ ಕಸಾಯಿ ಖಾನೆಯನ್ನು ಜಪ್ತಿ ಮಾಡಿ ಸರಕಾರದ ವಶಕ್ಕೆ ಪಡೆಯಲಾಗಿದೆ.ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲು ಎಂದು ಜಿಲ್ಲಾ ಎಸ್ಪಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!