ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 15 ಸಾವಿರ ರೂ. ಮೌಲ್ಯದ ಕೆಂಪುಕಲ್ಲುಗಳ ಸಹಿತ ಲಾರಿ ವಶ .

ಮಂಗಳೂರು: ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 15 ಸಾವಿರ ರೂ. ಮೌಲ್ಯದ ಕೆಂಪುಕಲ್ಲುಗಳ ಸಹಿತ ಲಾರಿಯನ್ನು ಪಡೀಲ್ ಬಳಿ ಕಂಕನಾಡಿ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಎಎಸ್‌ಐ ಆನಂದ್ ಅವರು ಪಿಸಿ ಹರಿಶ್ಚಂದ್ರ ರವರೊಂದಿಗೆ ರೌಂಡ್ಸ್ ಕರ್ತವ್ಯ ಮಾಡುವಾಗ ಪಡೀಲ್ ಜಂಕ್ಷನ್ ಬಳಿಯ ಪೆಟ್ರೋಲ್ ಪಂಪ್ ಪಕ್ಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಂಪ್ ವೆಲ್ ಕಡೆಯಿಂದ ಲಾರಿಯೊಂದು ಬಂದಿದೆ. ನಿಲ್ಲಿಸುವಂತೆ ಸೂಚನೆ ನೀಡಿದಾಗ ಸ್ವಲ್ಪ ದೂರ ಹೋಗಿ ನಿಲ್ಲಿಸಿ ಚಾಲಕ ಲಾರಿಯಿಂದ ಪರಾರಿಯಾಗಿದ್ದಾನೆ.

ಲಾರಿಯನ್ನು ಪರಿಶೀಲಿಸಿದಾಗ ಕೆಂಪು ಕಲ್ಲುಗಳು ಕಂಡು ಬಂದಿದೆ. ಲಾರಿಯ ಮೌಲ್ಯ 6 ಲಕ್ಷ ರೂ. ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!