ಅಕ್ಟೋಬರ್ 24 ಕ್ಕೆ ಬೋಳೂರಿನ ನೂತನ ಶ್ರೀ ಮಹಾಮಾಯಿ ದೇವರ ಗರ್ಭಗುಡಿಯ ಶಿಲಾನ್ಯಾಸ ಕಾರ್ಯಕ್ರಮ …. !

ಇತಿಹಾಸ ಪ್ರಸಿದ್ಧ ಬೋಳೂರಿನ ಶ್ರೀ ವೀರಭದ್ರ ಮಹಾಮಾಯಿ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಆಶ್ರಯದಲ್ಲಿ ನೂತನ ಶ್ರೀ ಮಹಾಮಾಯಿ ದೇವರ ಗರ್ಭಗುಡಿಯ ಶಿಲಾನ್ಯಾಸ ಸಮಾರಂಭವು ಅಕ್ಟೋಬರ್ 24 ರಂದು ಪೂರ್ವಾಹ್ನ 8.04 ರಿಂದ ಶುರುವಾಗಲಿದೆ ಎಂದು ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಬಾಲಕೃಷ್ಣ ಕಲ್ಬಾವಿ ತಿಳಿಸಿದರು .

ಅವರು ಪತ್ರಿಕಾ ಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ , ಅಂದಾಜು ೩. ೯೨ ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣ ಕಾರ್ಯನಡೆಯುವ ಈ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ .ಡಿ.ವೇದವ್ಯಾಸ ಕಾಮತ್ ಇವರು ಅಧ್ಯಕ್ಷತೆ ವಹಿಸಲಿದ್ದಾರೆ , ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಶುಭ ನುಡಿಯನ್ನು ಹೇಳಲಿದ್ದಾರೆ , ಬ್ರಹ್ಮ ಶ್ರೀ ವೇದಮೂರ್ತಿ ದೇರೆಬೈಲ್ ವಿಠಲ್ ತಂತ್ರಿಗಳು ಆಶೀರ್ವಚನಗೈಯಲಿದ್ದಾರೆ , ವಿದ್ವಾನ್ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ವಾಸ್ತು ತಜ್ಞರು ಉಡುಪಿ ಇವರು ಧಾರ್ಮಿಕ ಉಪನ್ಯಾಸ ಗೈಯಲಿದ್ದಾರೆ , ಗಂಗಾಧರ ಶೆಟ್ಟಿ ಬೋಳೂರು ಇವರು ದೀಪ ಪ್ರಜ್ವಲನೆ ಮಾಡಲಿದ್ದಾರೆ , .ಬಿ.ಟಿ.ವಾದಿರಾಜ್ ಮೊಕೇಸ್ತರರು ಶಿಲಾನ್ಯಾಸ ಗೈಯಲಿದ್ದಾರೆ , ಬಾಬಾ ಅಲಂಕಾರ್ ಇಂಜಿನಿಯರ್ ಉರ್ವ ಮಂಗಳೂರು ಇವರು ಶ್ರೀ ಕ್ಷೇತ್ರ ಪರಿಚಯದ ದೃಶ್ಯ ಬಿಡುಗಡೆಗೊಳಲಿದೆ ಎಂದರು .

ಬೋಳೂರು ಗ್ರಾಮದ ಅಧಿದೇವತೆಯಾಗಿ ಭಕ್ತರ ಅಭೀಷ್ಠೆಗಳನ್ನು ಕ್ಷಿಪ್ರವಾಗಿ ಈಡೇರಿಸುವ ಶ್ರೀ ಮಹಾಮಾಯಿ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರ ಮಹತ್ಕಾರ್ಯದಲ್ಲಿ ಊರ ಪರವೂರ ಭಕ್ತಾಭಿಮಾನಿಗಳು ತನುಮನ-ಧನಗಳೊಂದಿಗೆ ಕೈ ಜೋಡಿಸುವ ಮೂಲಕ, ಶ್ರೀ ಕ್ಷೇತ್ರದ ದೈವ ದೇವರುಗಳ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಅವರು ಕೇಳಿಕೊಂಡರು .

ಪತ್ರಿಕಾಗೋಷ್ಠಿಯಲ್ಲಿ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಗೌರಾವಾಧ್ಯಕ್ಷರಾದ ಲೋಕಯ್ಯ ಶೆಟ್ಟಿಗಾರ್ ಬೋಳೂರು ,ಲೋಕನಾಥ್ ಕೊಂಚಾಡಿ , ಬಿ.ಸಚ್ಚಿದಾನಂದ ಶೆಟ್ಟಿ ಬೋಳೂರು, ಸದಸ್ಯರಾದ ಎಂ.ಜಯರಾಮ್ ಮಣ್ಣಗುಡ್ಡೆ , ಲಕ್ಷ್ಮಣ ಕೊಡಿಯಾಲ್‌ ಬೈಲು ಮುಂತಾದವರು ಉಪಸ್ಥಿತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!