ಬಂಟ್ವಾಳ: ಅತಿಯಾದ ಮಳೆಗೆ ಚಾಲಕನ ನಿಯಂತ್ರಣ ಕಳೆದು ಚರಂಡಿಯ ಮೇಲೆ ಕಾರು ಹತ್ತಿದ ಘಟನೆ ಆ.22 ರಂದು ರಾತ್ರಿ ವೇಳೆ ನಡೆದಿದೆ.ಪುತ್ತೂರು ನಿವಾಸಿ ಇರ್ಶಾದ್ ಎಂಬವರು ಪತ್ನಿ ಜೊತೆ ಮಂಗಳೂರಿಗೆ ತೆರಳುವ ಸಂದರ್ಭದಲ್ಲಿ ಘಟನೆ ನಡೆದಿದೆ.

ಘಟನೆಯಲ್ಲಿ ಯಾವುದೇ ಅಪಾಯವಾಗದೆ ಕಾರಿನಲ್ಲಿದ್ದ ಇಬ್ಬರು ಸೇಫ್ ಆಗಿದ್ದಾರೆ.ಘಟನೆಯ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.


