ಸ್ವೀಕರ್ ಯುಟಿ ಖಾದರ್ ಮೇಲೆ ಮಾಡಿದ ಭ್ರಷ್ಟಾಚಾರದ ಆರೋಪ ಸರಿಯಲ್ಲ , ಶಾಸಕ ಭರತ್ ಶೆಟ್ಟಿ ಆಪಾದನೆ ಸುಳ್ಳು : ಕೆಪಿಸಿಸಿ ದ.ಕ ಜಿಲ್ಲಾ ವಕ್ತಾರ ಎ ಸಿ ವಿನಾಯರಾಜ್

ಮಂಗಳೂರು: ಸ್ವೀಕರ್ ಯುಟಿ ಖಾದರ್ ಮೇಲೆ ವಿದ್ಯಾವಂತ ಶಾಸಕರೆಂದು ಕರೆಸಿಕೊಳ್ಳುವ ಶಾಸಕ ಭರತ್ ಶೆಟ್ಟಿ ಮಾಡಿದ ಭ್ರಷ್ಟಾಚಾರದ ಅಪವಾದನೇ ಸರಿಯಲ್ಲ , ಇದು ಸಭಾಧ್ಯಕ್ಷರ ಸ್ಥಾನಕ್ಕೆ ಕಳಂಕ ತಂದಿದೆ ಎಂದು ಕೆಪಿಸಿಸಿ ದ.ಕ ಜಿಲ್ಲಾ ವಕ್ತಾರ ಎ ಸಿ ವಿನಾಯರಾಜ್ ಮಂಗಳೂರಿನ ಉತ್ತರ ಕ್ಷೇತ್ರದ ಶಾಸಕರಾದ ಡಾ ವೈ ಭರತ್ ಶೆಟ್ಟಿ ಹೇಳಿಕೆಯನ್ನು ಖಂಡಿಸಿದರು .

ಅವರು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಖಾದರ್ ಅವರು ೫ ಭಾರಿ ಶಾಸಕರಾಗಿ ಆಯ್ಕೆ ಆಗಿ ವಿವಿಧ ಇಲಾಖೆಗಳಲ್ಲಿ ದಕ್ಷವಾಗಿ ಕರ್ತವ್ಯವನ್ನು ನಿಭಾಯಿಸಿ ಸಮರ್ಥ ಮಂತ್ರಿಯೆಂದು ಕರೆಸಿಕೊಂಡವರು . ರಾಜಕೀಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಅವರು ಸಭಾಪತಿಗಳ ಸ್ಥಾನವನ್ನು ಅಲಂಕರಿಸಿದ್ದರು ಆದರೆ ಅವರ ಮೇಲೆ ಈಗ ಮಾಡುತ್ತಿರುವ ಆಪಾದನೆ ಸರಿಯಲ್ಲ .

ಖಾದರ್ ಅವರು ಶಾಸಕರ ಅಭಿವೃದ್ಧಿ ಮತ್ತು ಅವರ ಕ್ಷೇಮಕ್ಕಾಗಿ ಶ್ರಮಿಸುವವರು . ಅವರಿಗೆ ಬೇಕಾದ ಮೂಲ ಸೌಲಭ್ಯವನ್ನು ಒದಗಿಸಿದ್ದಾರೆ.ಹಳೆಯ ಅಗತ್ಯವಾದ ವಸ್ತುವನ್ನು ಬದಲಾಯಿಸಿ ಹೊಸ ಸೌಲಭ್ಯವನ್ನು ನೀಡಿದ್ದಾರೆ . ಈ ಸೌಲಭ್ಯಗಳನ್ನು ಅನುಭವಿಸುವಾಗ ಮಾತನಾಡದ ಇವರು ಇಂದು ರಾಜಕೀಯ ಲಾಭಕ್ಕಾಗಿ ಮತ್ತು ಪ್ರಚಾರಕ್ಕಾಗಿ ಈ ರೀತಿ ಮಾತನಾಡುತ್ತಾ ಇದ್ದಾರೆ .

ಕೋವಿಡ್ ಸಮಯಲ್ಲಿ ಬಿಜೆಪಿ ಸರಕಾರವೇ ಆಡಳಿತದಲ್ಲಿ ಇತ್ತು ಆ ಸಮಯದಲ್ಲಿ ಕಿಟ್ , ವೆಂಟಿಲೇಟರ್ ,ಮಾಸ್ಕ್ ಹೀಗೆ ಮುಂತಾದ ವೈದ್ಯಕೀಯ ಸೌಲಭ್ಯವನ್ನು ಖರೀದಿಸಲು ಸುಮಾರು 7, 200 ಕೋಟಿ ಖರ್ಚು ಮಾಡಿತ್ತು ಎಂದು ಹೇಳಿತ್ತು . ಆದರೆ ಜಸ್ಟೀಸ್ ಜಾನ್ ಕುನ್ಹಾ ವರದಿ ಹೊರ ಬಂದ ಕೂಡಲೇ ಇದರ ಸತ್ಯಾಸತ್ಯತೆ ಹೊರ ಬಂದಾಗ . ಇದು ದೊಡ್ಡ ಬ್ರಹ್ಮಾಂಡ ಭ್ರಷ್ಟಾಚಾರ ಎಂಬುದಾಗಿ ತಿಳಿಯಿತು . ಆ ಸಮಯದಲ್ಲಿ ಇದೇ ಮಂತ್ರಿ ಮಂಡಲ ಸಂಪುಟದಲ್ಲಿ ಭರತ್ ಶೆಟ್ಟಿ ಇದ್ದು ಅವರು ಏನೂ ಮಾತಾಡೇ ಇಲ್ಲ .

ಸಭಾಧ್ಯಕ್ಷರು ದಕ್ಷವಾಗಿ ಆಡಳಿತವನ್ನು ನಡೆಸಿದ್ದಾರೆ ಅವರ ಹೆಸರನ್ನು ಕೆಡಿಸಲೆಂದೇ ಈ ರೀತಿ ಮಾಡುತ್ತಾ ಇದ್ದಾರೆ. ವಿಧಾನ ಸೌಧದಲ್ಲಿ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಮಾತನ್ನು ಆಡಿದ್ದ ಭರತ್ ಮೇಲೆ ಪ್ರಕರಣ ದಾಖಲಾಗಿತ್ತು , ಸಭಾ ಕಲಾಪದಿಂದ ಅಮಾನತನ್ನು ಕೊಂಡ ಶಾಸಕ ಎನ್ನುವ ಹಣೆ ಪಟ್ಟಿ ಕೂಡ ಅವರಿಗಿದೆ . ಇದು ದಕ್ಷಿಣ ಕನ್ನಡ ಜಿಲ್ಲೆಗೆ ದೊಡ್ಡ ಕಳಂಕವನ್ನೇ ತಂದಿತ್ತು.

ದಕ್ಷಿಣ ಕನ್ನಡದ ಒಬ್ಬ ಶಾಸಕ ದಕ್ಷಿಣ ಕನ್ನಡದ ಇನ್ನೊಂದು ಶಾಸಕರ ಮೇಲೆ ಸುಳ್ಳು ಆಪಾದನೆಯನ್ನು ದಾಖಲೆ ರಹಿತವಾಗಿ ಮಾಡುವುದು ಎಷ್ಟರ ಮಟ್ಟಿಗೆ ಸರಿ . ಇವರು ಪ್ರಚಾರಕ್ಕಾಗಿ ಈ ರೀತಿಯ ಮಾತುಗಳನ್ನು ಆಡ್ತಾ ಇದ್ದಾರೆ . ಭರತ್ ಈಗ ಪ್ರತಿನಿಧಿಸುವ ಕ್ಷೇತ್ರವು ಎಷ್ಟರ ಮಟ್ಟಿಗೆ ಅಭಿವೃದ್ಧಿಯನ್ನು ಹೊಂದಿದೆ , ಉದ್ಯೋಗ ಅವಕಾಶವನ್ನು ಎಷ್ಟರ ಮಟ್ಟಿಗೆ ನಿರ್ಮಿಸಿದ್ದಾರೆ ಎಂದು ಪ್ರಶ್ನೆ ಮಾಡಿದರು .

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡರಾದ ಎಸ್ ಅಪ್ಪಿ , ಚಂದ್ರಕಲಾ ಜೋಗಿ , ರೂಪ ಚೇತನ್ , ಅನಿಲ್ ಕುಮಾರ್ ಮುಂತಾದವರು ಉಪಸ್ಥಿತತರಿದ್ದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!