ಮಂಗಳೂರು: ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಕಾಂಗ್ರೆಸ್ ಹೈಕಮಾಂಡ್ ನಾಯಕರ ಏಜೆಂಟ್’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಟೀಕಿಸಿರುವುದು ಸರಿಯಲ್ಲ ಬಿಜೆಪಿಯಲ್ಲಿ ಕೂಡ ಹೈಕಮಾಂಡ್ ಇದೆ ಅವರನ್ನು ಈ ರೀತಿಯಾಗಿಯೇ ಟೀಕಿಸುತ್ತಾರೆಯೇ ಎಂದು ಆರ್.ಅಶೋಕ್ ಗೆ ಮಾಜಿ ಸಚಿವರಾದ ಬಿ.ರಮಾನಾಥ ರೈ ಪ್ರಶ್ನೆ ಮಾಡಿದರು .
ಅವರು ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಆರ್ ಅಶೋಕ್ ಅವರು ಕಿಡಿಕೇಡಿ ತನದ ಹೇಳಿಕೆಯನ್ನು ನೀಡಿದ್ದಾರೆ .ಪ್ರಬುದ್ಧತೆ ಇಲ್ಲದಂತಹ ಮಾತುಗಳನ್ನು ತುಟಿ ಬಿಚ್ಚಿ ಮಾತಾಡಿದ್ದಾರೆ . ಅಶೋಕ್ ಅವರ ಬೇರೆ ಬೇರೆ ಹೇಳಿಕೆಯನ್ನು ನಾನು ಕೇಳಿದ್ದೇನೆ , ಅದರಲ್ಲಿ ಕೆ.ಸಿ.ವೇಣುಗೋಪಾಲ್ ಕಾಂಗ್ರೆಸ್ ಹೈಕಮಾಂಡ್ ನಾಯಕರ ಏಜೆಂಟ್’ ಎಂದು ಹೇಳಿರುವುದು ಒಂದು . ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಓರ್ವ ಏಜೆಂಟ್ ಆಗುದಾದರೆ ಇವರಿಗೆ ಹೈಕಮಾಂಡ್ ಇಲ್ವಾ , ಇವರ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಏಜೆಂಟಾ …? ಉಸ್ತುವಾರಿಗಳೇನು ಬ್ರೋಕರಾ …. ? . ಇಂತಹ ಪಾಲಿಶವಾದ ಹೇಳಿಕೆ ಸರಿಯಲ್ಲ ಎಂದರು .
ಬಿಹಾರದಲ್ಲಿ ಚುನಾವಣೆಯಲ್ಲಿ ವಿಜಯದ ಬಳಿಕ ಈ ರೀತಿಯ ಹೇಳಿಕೆಗಳು ಜಾಸ್ತಿಯಾಗಿದೆ . ಚುನಾವಣಾ ಆಯೋಗದ ಸಹಕಾರ ದಿಂದ ಅಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎನ್ನುವುದು ನನ್ನ ಅಭಿಪ್ರಾಯ . ಚುನಾವಣೆಯ ಸಂದರ್ಭದಲ್ಲಿ ಮೊದಲೇ ೧೦ ಸಾವಿರ ರೂ ಅಲ್ಲಿನ ನಾಗರಿಕರ ಖಾತೆಗೆ ಜಮೆ ಮಾಡಿ ಜನರಿಗೆ ಆಮಿಷ ಒಡ್ಡಿರುವುದು ನ್ಯಾಯವೇ ,ಕರ್ನಾಟಕ ಸರಕಾರದ ಯೋಜನೆಗಳಿಗೆ ಬಿಟ್ಟಿ ಯೋಜನೆಗಳೆಂದು ಕರೆದವರು ಈ ರೀತಿ ಮಾಡಿರುವುದು ಸರಿಯೇ ಎಂದು ವ್ಯಂಗ ಮಾಡಿದರು .ಪ್ರತೀ ಬಾರಿ ಏನಾದರೂ ಒಂದು ಟೀಕೆ ಮಾಡ್ತಾ ಇರೋ ಆರ್.ಅಶೋಕ ಬೆಂದೂರ್ ವೆಲ್ ನಲ್ಲಿರುವ ಸರಕಾರಿ ಜಾಗವನ್ನು ಖಾಸಗಿ ವ್ಯಕ್ತಿಗೆ ಮಾರಾಟ ಮಾಡಿರುವುದು ನ್ಯಾಯವೇ ಎಂದರು .
ನಮ್ಮ ದೇಶದಲ್ಲಿ ಡಾಲರ್ ಎದುರು ರೂಪಾಯಿಯ ಮೌಲ್ಯ ಕಡಿಮೆ ಆಗ್ತಾ ಇದೆ . ಒಂದು ಕಾಲದಲ್ಲಿ ರೂಪಾಯಿ ಮೌಲ್ಯ ಕಡಿಮೆ ಆದಾಗ ದೇಶದ ವರ್ಚಸ್ಸು ಕಡಿಮೆ ಆಯಿತ್ತೆಂದು ಬೊಬ್ಬೆ ಹಾಕುವವರು ಇಂದು ಎಲ್ಲಿ ಇದ್ದಾರೆ ಎಂದು ಕೇಂದ್ರದ ಆಡಳಿತ ಸರಕಾರಕ್ಕೆ ಪ್ರಶ್ನೆ ಮಾಡಿದರು .ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೇಸ್ ಸದಸ್ಯರಾದ ಸುಭಾಷ್ ಆಳ್ವಾ , ಅಪ್ಪಿ , ಅಶ್ರಫ್ , ಪ್ರೇಮ್ ಬಳ್ಳಾಲ್ ಭಾಗ್ ಮುಂತಾದವರು ಉಪಸ್ಥಿತರಿದ್ದರು.