ಮಂಗಳೂರು: ಸಂತ ಮದರ್ ತೆರೆಸಾ ವಿಚಾರ ವೇದಿಕೆ ಮಂಗಳೂರು ಮತ್ತು ಕಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಸಂಯುಕ್ತ ಆಶ್ರಯದಲ್ಲಿ “ಸೌಹಾರ್ದ ಕ್ರಿಸ್ಮಸ್ ಉತ್ಸವ 2025” ಆಚರಣೆಯನ್ನು ಡಿಸೆಂಬರ್ 13 ಮತ್ತು 14 ರಂದು ಕದ್ರಿ ಪಾರ್ಕ್ನಲ್ಲಿ, ಮಧ್ಯಾಹ್ನ 2:30ರಿಂದ ರಾತ್ರಿ 9:30ರ ತನಕ ನಡೆಯಲಿದೆ ಎಂದು ವಿಚಾರ ವೇದಿಕೆಯ ಕಾರ್ಯದರ್ಶಿಗಳಾದ ಸುನಿಲ್ ಕುಮಾರ್ ಬಜಾಲ್ ತಿಳಿಸಿದರು .
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , ಸರ್ವ ಧರ್ಮದ ಹಬ್ಬಗಳು ಸರ್ವ ಜನತೆಯ ಹಬ್ಬವಾಗಲಿ ಎನ್ನುವ ಆಶಯದಲ್ಲಿ ಈ ಹಬ್ಬವನ್ನು ತುಂಬಾನೇ ಅರ್ಥ ಬರಿತವಾಗಿ ಆಚರಿಸಲಾಗುತ್ತದೆ . ಕ್ರಿಸ್ಮಸ್ ಹಬ್ಬದ ನಿಜವಾದ ಸಂದೇಶವಾದ ಶಾಂತಿ, ಸೌಹಾರ್ದ ಮತ್ತು ಸಹಭಾಗಿತ್ವವನ್ನು ಉತ್ತೇಜಿಸುವುದು ನಮ್ಮ ಉದ್ದೇಶವಾಗಿದೆ . ಈ ವಿಶೇಷ ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಕ್ಯಾರಲ್ ಹಾಡುಗಳ ಸ್ಪರ್ಧೆ , ಕ್ರಿಸ್ಮಸ್ ಕೇಲ್ ಸ್ಪರ್ಧೆ , ಕ್ರಿಸ್ಮಸ್ ಕೇಕ್ ಸ್ಪರ್ಧೆ , ಕ್ರಿಸ್ಮಸ್ ಸ್ಟಾರ್ ಸ್ಪರ್ಧೆಗಳು ನಡೆಯಲಿದೆ . ಹಾಗೆಯೇ ವೈನ್ ಮೇಳ , ಆಹಾರ ಮಳಿಗೆಗಳು ಕೂಡ ಅಲ್ಲಿ ಇರಲಿದೆ . ಕರಾವಳಿಯ ಪ್ರಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು .
ಪತ್ರಿಕಾ ಗೋಷ್ಠಿಯಲ್ಲಿ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷರಾದ ರಾಯ್ ಕ್ಯಾಸ್ಟಲಿನೋ , ಸದಸ್ಯರಾದ ಸಂತೋಷ್ ಡಿಸೋಜಾ ಸ್ಟ್ಯಾನಿ ಲೋಬೊ , ಸ್ಟ್ಯಾನ್ಲಿ ಬಂಟ್ವಾಳ , ರೆಹಮಾನ್ ಖಾನ್ ಕುಂಜಾತಬೈಲ್ , ಸಮರ್ಥ್ ಭಟ್ ಉಪಸ್ಥಿತರಿದ್ದರು .