ಡಿ 28 ರಂದು ಬಂಟರ ಸಂಘ ಬಜಪೆ ವಲಯದ ಆಶ್ರಯದಲ್ಲಿ ಪಾಲ್ದಟ್ಟೆಡ್ ಬಂಟೆರೆ ಪರ್ಬ-2025

ಮಂಗಳೂರು: ಪಾಲ್ದಟ್ಟೆಡ್ ಬಂಟೆರೆ ಪರ್ಬ-2025 ಕಾರ್ಯಕ್ರಮವು ಡಿ 28 ರವಿವಾರ ಬಂಟರ ಸಂಘ ಬಜಪೆ ವಲಯದ ಆಶ್ರಯದಲ್ಲಿ ನಡೆಯಲಿರುವುದು . ಈ ಕ್ರಾಯಕ್ರಮದಲ್ಲಿ ನೂತನ ಅಧ್ಯಕ್ಷರ ಪದಗ್ರಹಣ, ಬಂಟರ ಸಂಘಗಳ ಸಾಂಸ್ಕೃತಿಕ ಸ್ಪರ್ಧೆ , ಗೌರವ ಅಭಿನಂದನೆ, ವಿದ್ಯಾನಿಧಿಯ ಉದ್ಘಾಟನೆ, ಆರ್ಥಿಕ ಸಹಾಯಧನ ವಿತರಣಾ ಕಾರ್ಯಕ್ರಮವುಬಜಪೆಯ ತಾರಿಕಂಬಳ ಬಂಟರ ಸಂಘದ ನಿವೇಶನದಲ್ಲಿ ನಡೆಯಲಿರುವುದು ಎಂದು ಸಂಘದ ಉಪಾಧ್ಯಕ್ಷರಾದ ಸುಕೇಶ್ ಶೆಟ್ಟಿ ಮುಂಡಾರುಗುತ್ತು ತಿಳಿಸಿದರು .

ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿ , ೧೦. ೩೦ ನೂತನ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಶುರುವಾಗಲಿದ್ದು ಇದರ ಉದ್ಘಾಟನೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಮಾಡುವರು . ದೀಪ ಪ್ರಜ್ವಲನೆಯನ್ನು ಬಂಟರ ಯಾನೆ ನಾಡವರ ಮಾತೃ ಸಂಘ (ರಿ) ಮಂಗಳೂರು ಇದರ ಅಧ್ಯಕ್ಷರಾದ ಅಜಿತ್ ಕುಮಾರ್ ರೈ ಮಾಲಾಡಿ ನೆರವೇರಿಸುವರು , ಬಂಟರ ಸಂಘ (ರಿ.) ಬಜಪೆ ವಲಯ ಅಧ್ಯಕ್ಷರಾದ ಬಾಬು ಶೆಟ್ಟಿ ಪೆರಾರ ಅಧ್ಯಕ್ಷತೆಯನ್ನು ವಹಿಸಲಿರುವವರು , ಧ್ವಜಾರೋಹಣ ವಿಜಯನಾಥ ವಿಠಲ ಶೆಟ್ಟಿ ನೆರವೇರಿಸುವರು . ನೂತನ ಅಧ್ಯಕ್ಷರಾಗಿ ಕರಂಬಾರು ಪಡುಮನೆ ವೇಣುಗೋಪಾಲ್ ಎಲ್ ಶೆಟ್ಟಿಯವರ ಪದಗ್ರಹಣ ನಡೆಯಲಿದೆ . ಗೌರವ ಅಭಿನಂದನೆಯನ್ನು ಪೂನಾ ಬಂಟರ ಸಂಘದ ಅಧ್ಯಕ್ಷರಾದ ಅಜಿತ್ ಹೆಗ್ಡೆ ಕೆಂಜಾರುಗುತ್ತು , ಮುಡಾರೆ ಫೌಂಡೇಶನ್ (ರಿ) ಮಂಗಳೂರು ಇದರ ಅಧ್ಯಕ್ಷರಾದ ಸತೀಶ್ ಆಳ್ವ, , ಉದ್ಯಮಿಗಳಾದ ಗಣೇಶ್ ಬಾಳಿಗ ಇವರಿಗೆ ನೀಡಲಾಗುವುದು . ಈ ಸಂಧರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ಕ್ಯಾ ಬ್ರಿಜೇಶ್ ಚೌಟ , ಶಾಸಕರಾದ ರಾಜೇಶ್ ನಾಯ್ಕ್ , ಉಮಾನಾಥ್ ಕೋಟ್ಯಾನ್ ಸಹಿತ ಮುಂತಾದ ಮಂದಿ ಗಣ್ಯರು ಉಪಸ್ಥಿತರಿರಲಿದ್ದಾರೆ ಎಂದರು .

ಸಂಜೆ ೪. ೩೦ ರಿಂದ ಸಮರೋಪ ಸಮಾರಂಭ ನಡೆಯಲಿದ್ದು ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಹೇರಂಬಾ ಇಂಡಸ್ಟ್ರೀಸ್ ಲಿಮಿಟೆಡ್, ಮುಂಬಯಿ ಇದರ ಆಡಳಿತ ನಿರ್ದೇಶಕರಾದ ಡಾ| ಕನ್ಯಾನ ಸದಾಶಿವ ಶೆಟ್ಟಿ ನೆರವೇಲಿಸುವರು . ಕಾರ್ಯಕ್ರಮದ ಉದ್ಘಾಟಕರಾಗಿ ಭವಾನಿ ಶಿಪ್ಪಿಂಗ್ ಕಾರ್ಪೊರೇಷನ್ ಲಿಮಿಟೆಡ್ ಮುಂಬೈ ಇದರ ಆಡಳಿತ ನಿರ್ದೇಶಕರಾದ ಕುಸುಮಾಧರ ಡಿ ಶೆಟ್ಟಿ ಭಾಗವಹಿಸುವರು . ವಿದ್ಯಾ ನಿಧಿಯ ಉದ್ಘಾಟನೆಯನ್ನು ಶಶಿ ಕ್ಯಾಟರಿಂಗ್ ಸರ್ವಿಸಸ್ ಪ್ರೈ.ಲಿ.ಇದರ ನಿರ್ದೇಶಕರಾದ ಶಶಿಧರ ಶೆಟ್ಟಿ, ಬರೋಡ ನೆರವೇರಿಸುವರು . ಹೊಸಬೆಳಕು ಯೋಜನೆಯ ಫಲಾನುಭವಿಗಳಿಗೆ ಸಹಾಯಧನ ವಿತರಣೆಯನ್ನು ಯು.ಎ.ಇ. ಬಂಟರ ಸಂಘದ ಅಧ್ಯಕ್ಷರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಮಾಡಲಿರುವರು . ಆಸರೆ ಯೋಜನೆಯ ಫಲಾನುಭವಿಗಳಿಗೆ ಸಹಾಯಧನ ವಿತರಣೆಯನ್ನು ಬಂಟರ ಸಂಘ (ರಿ.), ಮುಂಬಯಿ ಇದರ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ ಮಾಡಲಿರುವರು , ಕರಂಬಾರು ಪಡುಮನೆ ವೇಣುಗೋಪಾಲ್ ಎಲ್ ಶೆಟ್ಟಿ ಈ ಸಮಯ ಅಧ್ಯಕ್ಷತೆಯನ್ನು ವಹಿಸಲಿರುವರು . ಗಣ್ಯರ ಸಮುಖದಲ್ಲಿ ಗೌರವ ಸನ್ಮಾನವನ್ನು ಎಂ ಆರ್ ಜಿ ಗ್ರೂಪ್ ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ ಕೆ ಪ್ರಕಾಶ್ ಶೆಟ್ಟಿ ಮತ್ತು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ ಎಂ ಮೋಹನ್ ಆಳ್ವ ಸ್ವೀಕರಿಸುವರು . ಸನ್ಮಾನವನ್ನು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಜಸ್ಟಿಸ್ ಎನ್ ಸಂತೋಷ್ ಹೆಗ್ಡೆ ನೆರವೇರಿಸುವರು ಎಂದರು .

ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಅಜಿತ್ ಕುಮಾರ್ ಶೆಟ್ಟಿ , ಸದಸ್ಯರಾದ ಹರೀಶ್ ಶೆಟ್ಟಿ , ಭರತ್ ಶೆಟ್ಟಿ ಉಪಸ್ಥಿತರಿದ್ದರು .

SHARE
Loading spinner

One thought on “ಡಿ 28 ರಂದು ಬಂಟರ ಸಂಘ ಬಜಪೆ ವಲಯದ ಆಶ್ರಯದಲ್ಲಿ ಪಾಲ್ದಟ್ಟೆಡ್ ಬಂಟೆರೆ ಪರ್ಬ-2025

Leave a Reply

Your email address will not be published. Required fields are marked *

error: Content is protected !!