ಯೂಟ್ಯೂಬ್ ನಲ್ಲಿ “ಕಣ್ಣ ರಂಗ್” ತರಂಗ -ಜನವರಿ 23 ರಂದು ಬಿಡುಗಡೆಗೆ ಸಜ್ಜಾಗಿರುವಕಟ್ಟೆಮಾರ್ ಚಿತ್ರ ದ ಹಾಡು ಬಿಡುಗಡೆ

ಮಂಗಳೂರು : ಹಲವು ಕಾರಣಗಳಿಂದ ಸದ್ದು ಮಾಡುತ್ತಿರುವ, ಜನವರಿ 23 ರಂದು ಬಿಡುಗಡೆಗೆ ಸಜ್ಜಾಗಿರುವ ‘ಕಟ್ಟೆಮಾರ್’ ತುಳು ಚಲನಚಿತ್ರದಿಂದ ಹಾಡೊಂದು ಈಗ ಬಿಡುಗಡೆಯಾಗಿದೆ. ‘ಕಣ್ಣ ರಂಗ್’ ಮೆಲೋಡಿ ಟ್ರ್ಯಾಕ್ ಅಸ್ತ್ರಪ್ರೊಡಕ್ಷನ್ ಹೌಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.

ಆರ್ ಕೆ ಮುಲ್ಕಿ ಮತ್ತು ಕಾರ್ತಿಕ್ ಮುಲ್ಕಿ ಸಾಹಿತ್ಯ ಬರೆದಿರುವ ಹಾಡಿಗೆ ಕಾರ್ತಿಕ್ ಮುಲ್ಕಿ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಶೇಷ ಎಂದರೆ ಮೊದಲ ಬಾರಿಗೆ ಸಿದ್ದಾರ್ಥ್ ಬೆಲ್ಮಣ್ ತುಳು ಸಾಹಿತ್ಯಕ್ಕೆ ಸ್ವರ ಜೋಡಿಸಿದ್ದಾರೆ. ಜೊತೆಗೆ ಪ್ರಥ್ವಿ ಭಟ್ ಕೂಡ ಹಾಡಿದ್ದಾರೆ.
ಯುವ ಜೋಡಿಗಳ ನಡುವಿನ ಪ್ರೀತಿ ಹಾಡು ಇದಾಗಿದ್ದು, ಕಾಂತಾರ ಖ್ಯಾತಿಯ ಸ್ವರಾಜ್ ಶೆಟ್ಟಿ, ಲಂಚುಲಾಲ್, ಹರ್ಷಿತಾ ಕುಲಾಲ್, ಆಕಾಂಕ್ಷಾ ರಾವ್ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.


ಸಚಿನ್ ಕಟ್ಲ ಮತ್ತು ರಕ್ಷಿತ್ ಗಾಣಿಗ ಆಕ್ಷನ್ ಕಟ್ ಹೇಳಿರುವ ಕಟ್ಟೆಮಾರ್ ಚಿತ್ರಕ್ಕೆ ಅಸ್ತ ಪ್ರೊಡಕ್ಷನ್ ಬ್ಯಾನರ್ ನಡಿ ಲಂಚುಲಾಲ್ ಬಂಡವಾಳ ಹೂಡಿದ್ದಾರೆ.
ಕಟ್ಟೆಮಾರ್ ಚಿತ್ರದಲ್ಲಿ ಸು ಫ್ರಮ್ ಸೋ ಖ್ಯಾತಿಯ ಜೆಪಿ ತೂಮಿನಾಡ್, ಸ್ವರಾಜ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಲಂಚುಲಾಲ್, ಬಾಸುಮ ಕೊಡಗು, ಮೈಮ್ ರಾಮದಾಸ್, ನಮಿತಾ ಕಿರಣ್, ಪುಷ್ಪರಾಜ್ ಬೊಳ್ಳಾರ್, ಹರ್ಷಿತಾ ಕುಲಾಲ್, ಆಕಾಂಕ್ಷಾ ರಾವ್ ಮುಂತಾದವರಿದ್ದಾರೆ.

SHARE
Loading spinner

One thought on “ಯೂಟ್ಯೂಬ್ ನಲ್ಲಿ “ಕಣ್ಣ ರಂಗ್” ತರಂಗ -ಜನವರಿ 23 ರಂದು ಬಿಡುಗಡೆಗೆ ಸಜ್ಜಾಗಿರುವಕಟ್ಟೆಮಾರ್ ಚಿತ್ರ ದ ಹಾಡು ಬಿಡುಗಡೆ

Leave a Reply

Your email address will not be published. Required fields are marked *

error: Content is protected !!