ಮಲಪ್ಪುರಂ : ‘ಆಪರೇಷನ್ ತೂಫಾನ್’ ಕಾರ್ಯಾಚರಣೆಯಡಿ ಅರೀಕೋಡ್ ಪೊಲೀಸರು ಹಾಗೂ ಮಲಪ್ಪುರಂ ಜಿಲ್ಲಾ ಡ್ಯಾನ್‌ಸಾಫ್ (DANSAF) ತಂಡ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಭಾರೀ ಪ್ರಮಾಣದ ಮಾದಕ ವಸ್ತು ಸಂಗ್ರಹ ಪತ್ತೆಯಾಗಿದೆ.

ಅರೀಕೋಡ್‌ನ ಮುಂಡಂಪರಂಬ್ ನಿವಾಸಿ ಪಂತಕ್ಕಾತ್ತೊಡಿ ಅಬ್ದುಲ್ ನಾಸರ್ (36) ಅವರನ್ನು ಬಂಧಿಸಲಾಗಿದೆ. ಆತ ಮಾದಕ ವಸ್ತು ಕಳ್ಳಸಾಗಣೆ ಜಾಲದ ಪ್ರಮುಖ ಸದಸ್ಯನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತನ ಮನೆಯಿಂದ ಮಾರುಕಟ್ಟೆ ಮೌಲ್ಯ ಲಕ್ಷಾಂತರ ರೂಪಾಯಿ ಇರುವ 254 ಗ್ರಾಂ ಎಂಡಿಎಂಎ (MDMA), ₹5 ಲಕ್ಷ ನಗದು ಹಾಗೂ ವಿದೇಶಿ ಕರೆನ್ಸಿ ವಶಪಡಿಸಿಕೊಳ್ಳಲಾಗಿದೆ.ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.



