ಚಿತ್ರಮಂದಿರಗಳಲ್ಲಿ ಆಹಾರ ಪದಾರ್ಥಗಳಿಗೆ ಅಧಿಕ ದರ: ಮಾಲೀಕರಿಗೆ 15 ದಿನಗಳ ಗಡುವು

ತಿರುವನಂತಪುರಂ: ಚಿತ್ರಮಂದಿರಗಳಲ್ಲಿ ಆಹಾರ ಪದಾರ್ಥಗಳಿಗೆ ಅಧಿಕ ದರ ವಿಧಿಸುತ್ತಿರುವ ಕುರಿತು ತಿರುವನಂತಪುರಂ ಮೇಯರ್ ಹಾಗೂ ಚಿತ್ರಮಂದಿರ ಮಾಲೀಕರ ನಡುವೆ ಚರ್ಚೆ ನಡೆಯಿತು. ಉತ್ಪನ್ನಗಳ ಬೆಲೆಯನ್ನು ನಿಯಂತ್ರಿಸುವ ಅಧಿಕಾರ ಮಹಾನಗರ ಪಾಲಿಕೆಗೆ ಇಲ್ಲ. ಶುದ್ಧ ಕುಡಿಯುವ ನೀರನ್ನು ಉಚಿತವಾಗಿ ನೀಡುವಂತೆ ಸೂಚಿಸಲಾಗಿದೆ.

ಮಕ್ಕಳ ಆಹಾರವನ್ನು ಚಿತ್ರಮಂದಿರದ ಒಳಗೆ ಕೊಂಡೊಯ್ಯುವುದಕ್ಕೆ ಯಾವುದೇ ಅಡ್ಡಿ ಇರಬಾರದು. ವಾಹನಗಳ ಪಾರ್ಕಿಂಗ್ ಸೌಲಭ್ಯ ಕಲ್ಪಿಸಬೇಕು. ಪರವಾನಗಿ ಮಾನದಂಡಗಳನ್ನು ಉಲ್ಲಂಘಿಸಬಾರದು. ಈ ವಿಚಾರಗಳಲ್ಲಿ ಮಹಾನಗರ ಪಾಲಿಕೆಯ ಕಡೆಯಿಂದ ಯಾವುದೇ ರಾಜಿ ಇರುವುದಿಲ್ಲ. ಅಗತ್ಯ ತಿದ್ದುಪಡಿಗಳನ್ನು ಕೈಗೊಳ್ಳಲು ಚಿತ್ರಮಂದಿರ ಮಾಲೀಕರಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ. ಬಳಿಕ ಮಹಾನಗರ ಪಾಲಿಕೆಯ ಸ್ಕ್ವಾಡ್ ತಪಾಸಣೆ ನಡೆಸಲಿದೆ.

ದೇಹ ತಪಾಸಣೆ ಹಾಗೂ ಬ್ಯಾಗ್ ತಪಾಸಣೆ ನಡೆಸುವಾಗ ವಿಶೇಷ ಎಚ್ಚರಿಕೆ ವಹಿಸಬೇಕು. ಮಹಿಳೆಯರನ್ನು ಮಹಿಳೆಯರೇ ತಪಾಸಣೆ ಮಾಡಬೇಕು. ಸಿನಿಮಾ ವೀಕ್ಷಿಸಲು ಬರುವವರ ವೈಯಕ್ತಿಕ ಗೌರವಕ್ಕೆ ಧಕ್ಕೆ ತರುವ ಯಾವುದೇ ಕ್ರಮವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಚಿತ್ರಮಂದಿರದ ಆವರಣದಲ್ಲೇ ಪಾರ್ಕಿಂಗ್ ಸೌಲಭ್ಯ ಕಲ್ಪಿಸಬೇಕು. ಅಗ್ನಿ ಸುರಕ್ಷತಾ ಮಾನದಂಡಗಳಲ್ಲಿ ಯಾವುದೇ ರಾಜಿ ಇರುವುದಿಲ್ಲ ಎಂದು ಮೇಯರ್ ಸ್ಪಷ್ಟಪಡಿಸಿದರು.

ಪರವಾನಗಿಗೆ ಅಗತ್ಯವಿರುವ ಹಲವು ಮಾನದಂಡಗಳನ್ನು ಚಿತ್ರಮಂದಿರಗಳು ಉಲ್ಲಂಘಿಸುತ್ತಿವೆ ಎಂದು ಮೇಯರ್ ತಿಳಿಸಿದರು . ಮಾನದಂಡಗಳನ್ನು ಉಲ್ಲಂಘಿಸಿರುವುದಾದರೆ ಅವುಗಳನ್ನು ಸರಿಪಡಿಸಬೇಕು. 15 ದಿನಗಳ ಬಳಿಕ ಮತ್ತೆ ಸಭೆ ನಡೆಸಲಾಗುವುದು. ಅದರ ನಂತರ ಸ್ಕ್ವಾಡ್‌ಗಳು ಚಿತ್ರಮಂದಿರಗಳಿಗೆ ತೆರಳಿ ತಪಾಸಣೆ ನಡೆಸಲಿವೆ ಎಂದು ಮೇಯರ್ ತಿಳಿಸಿದ್ದಾರೆ.

SHARE
Loading spinner

One thought on “ಚಿತ್ರಮಂದಿರಗಳಲ್ಲಿ ಆಹಾರ ಪದಾರ್ಥಗಳಿಗೆ ಅಧಿಕ ದರ: ಮಾಲೀಕರಿಗೆ 15 ದಿನಗಳ ಗಡುವು

Leave a Reply

Your email address will not be published. Required fields are marked *

error: Content is protected !!