ಹೊಸಂಗಡಿ – ಪಾಕಿಸ್ತಾನವನ್ನು ನಾಶ ಮಾಡಲು ಭಾರತಕ್ಕೆ ಒಂದು ದಿನವೂ ಬೇಡ ಆದರೆ ದೇಶದ ಒಳಗಿರುವ ದೇಶದ್ರೋಹಿಗಳನ್ನು ನಿಗ್ರಹ ಮಾಡಬೇಕಾದದ್ದು ದೇಶಪ್ರೇಮಿಗಳ ಕರ್ತವ್ಯ ಎಂದು ನಿವೃತ್ತ ಕಮಂಡರ್ ವಿಜಯ ಕುಮಾರ್ ಕಣ್ವತೀರ್ಥ ಹೇಳಿದರು ಹೊಸಂಗಡಿಯಲ್ಲಿ ಬಿಜೆಪಿ ಮಂಡಲ ಸಮಿತಿ ಹಮ್ಮಿಕೊಂಡ ಭಾರತ್ ಶೌರ್ಯ ತಿರಂಗ ಯಾತ್ರೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಿಜೆಪಿ ಮಾಜಿ ಜಿಲ್ಲಾ ಪ್ರ ಕಾರ್ಯದರ್ಶಿ ವಿಜಯ್ ರೈ ಉದ್ಘಾಟಿಸಿದರು, ಆಧುನಿಕ ಜಗತ್ತಿನಲ್ಲಿ ನರೇಂದ್ರ ಮೋದಿ ನೇತೃತ್ವದ ಭಾರತ ಬಲಿಷ್ಠ ಸೈನಿಕ ಶಕ್ತಿಯನ್ನು ಹೊಂದಿದೆ, ಪಾಕಿಸ್ತಾನ ದ ಒಂದೇ ಒಂದು ಡ್ರೋನ್ ಗಳು ಭಾರತ ದ ಮಣ್ಣನ್ನು ಸ್ಪರ್ಶ ಮಾಡಲು ಸಾಧ್ಯವಾಗಿಲ್ಲ ಆಪರೇಷನ್ ಸಿಂಧೂರ್ ದೇಶದ ಸೈನಿಕ ಶಕ್ತಿಯನ್ನು ಜಗತ್ತಿಗೆ ತೋರಿಸಿದೆ. ಭಾರತದ ಆಯುಧಗಳಿಗೆ ಜಗತ್ತಿನ ವಿವಿಧ ದೇಶಗಳಿಂದ ಬೇಡಿಕೆ ಬಂದಿದೆ ಎಂದು ಅವರು ಹೇಳಿದರು.
ನ್ಯಾಯ ನವೀನ್ ರಾಜ್ ಮಾತನಾಡಿ ದೃಢ ನಿರ್ಧಾರದ ಪ್ರಧಾನಿ ಇದ್ದರಲ್ಲಿ ಶತ್ರುಗಳ ನಾಶ ಕ್ಕೆ ಆಪರೇಷನ್ ಸಿಂಧೂರ ಉದಾಹರಣೆ ಎಂದು ಹೇಳಿದರು.
ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ, ಸ್ವಾಗತಿಸಿದರು ಮುಖಂಡರಾದ ಎ ಕೆ ಕಯ್ಯರ್,
ಪದ್ಮನಾಭ ಕಡಪ್ಪರ, ಯಾದವ ಬಡಾಜೆ ಸದಾಶಿವ ಚೇರಲ್, ಯತೀರಾಜ್ ಶೆಟ್ಟಿ,ತುಳಸಿ ಕುಮಾರಿ, ಆಶಾಲತಾ,ಸುಬ್ರಮಣ್ಯ ಭಟ್, ಸತ್ಯಶಂಕರ ಭಟ್, ಜಯರಾಮ ಕುಲಾಲ್, ಚಂದ್ರಹಾಸ ಶೆಟ್ಟಿ ಬೇಜ್ಜ, ಯಶ್ಪಲ್ ಮಂಜೇಶ್ವರ, ನೇತೃತ್ವ ನೀಡಿದರು. ಕೆ ವಿ ರಾಧಾಕೃಷ್ಣ ಭಟ್ ವಂದಿಸಿದರು.