ಕುಂಬಳೆ : ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬೆಡಿ ಮಹೋತ್ಸವದ ಅಂಗವಾಗಿ ಚಿರಂಜೀವಿ ಕುಂಬಳೆ ವತಿಯಿಂದ ಆಯೋಜಿಸಿರುವ ವಯಲಿನ್ ಫ್ಯೂಷನ್, ಮೆಗಾ ಮ್ಯೂಸಿಕಲ್ ನೈಟ್ ಹಾಗೂ ಸನ್ಮಾನ ಸಮಾರಂಭಗಳು 16 ಮತ್ತು 17 ರಂದು ನಡೆಯಲಿವೆ.
ವಯಲಿನ್ ವಾದನದ ಮೂಲಕ ವಿಶ್ವ ದಾಖಲೆ ಸಾಧಿಸಿರುವ ಕುಮಾರಿ ಗಾಯತ್ರಿ ಆಚಾರ್ಯ ಹಾಗೂ ಕುಮಾರಿ ಶ್ರಾವಣ್ಯ ಆಚಾರ್ಯ ಅವರ ವಯಲಿನ್ ಕಾರ್ಯಕ್ರಮವು 16ರಂದು ಸಂಜೆ 6 ಗಂಟೆಗೆ ಆರಂಭಗೊಳ್ಳಲಿದೆ.ಕಾರ್ಯಕ್ರಮವನ್ನು ಅಡ್ವೊಕೇಟ್ ಸುಬ್ಬಯ್ಯರೈ ಇಚ್ಚಿಲಂಪಾಡಿ ಉದ್ಘಾಟಿಸಲಿದ್ದಾರೆ.
ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಮೋಹನ್ದಾಸ್ ಪರಮಹಂಸ ಸ್ವಾಮೀಜಿ, ಚಕ್ರಪಾಣಿ ದೇವಪೂಜಿತಾಯ ಮುಖ್ಯ ಅತಿಥಿಗಳಾಗಿರುತ್ತಾರೆ.
ಈ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ 8 ಗಣ್ಯರನ್ನು ಸನ್ಮಾನಿಸಲಾಗುವುದು.
ಡಾ. ಕನ್ಯಾನ ಸದಾಶಿವ ಶೆಟ್ಟಿ (ಕೂಳೂರು),
ಕೆ.ಕೆ. ಶೆಟ್ಟಿ (ಅಹಮದ್ ನಗರ),
ಪದ್ಮಶ್ರೀ ಸತ್ಯನಾರಾಯಣ ಬಾಳೇರಿ,
ಡಾ. ವಿ. ಬಾಲಕೃಷ್ಣನ್ (ಡಿವೈಎಸ್ಪಿ),
ಡಾ. ಸರ್ವೇಶ್ವರ ಭಟ್ (ಕುಂಭಳ),
ಡಾ. ಜ್ಯೋತಿ ಡಿ. (ಎಂಬಿಬಿಎಸ್–ಡಿಜಿಒ),
ಬಿ. ವಸಂತ ಪೈ (ಬದಿಯಡ್ಕ),
ಎಂ.ಎಸ್. ಮುಹಮ್ಮದ್ ಕುಂಜಿ (ಮೊಗ್ರಾಲ್)
ಕಾರ್ಯಕ್ರಮದಲ್ಲಿ ಡಾ. ಹರಿ ಕಿರಣ್ ಟಿ. (ಬಂಕಾರ), ಡಾ. ಕಿಶೋರ್ ಕುಮಾರ್ ಬಿ. (ಕುಂಬಳೆ), ಡಾ. ಸಾಮ್ಪಾಬಿ–ಕಿಶೋರ್ (ಕುಂಬಳೆ), ಡಾ. ಮಮತಾ ಪಿ. ಶೆಟ್ಟಿ, ರಘುನಾಥ ಪೈ (ಕುಂಬಳೆ), ಜಯಕುಮಾರ್ (ಕುಂಬಳೆ), ಗೋಪಾಲ್ ಆರಿಕ್ಕಾಡಿ, ನಾರಾಯಣ ಪ್ರಭು, ಕೆ.ವಿ. ಶಿವರಾಮನ್, ಬಿ. ತಿಮ್ಮಪ್ಪ ಆಳ್ವ, ಮಂಜುನಾಥ ಆಳ್ವ, ಶಿವಶಂಕರ ನೆಕ್ರಾಜೆ, ಕೆ.ಸಿ. ಮೋಹನನ್ ಭಾಗವಹಿಸಲಿದ್ದಾರೆ.
ಚೆಂಪಲ್ತಿಮಾರ್ ಅಧ್ಯಕ್ಷತೆ ವಹಿಸಲಿದ್ದು, ಚಿರಂಜೀವಿ ಕಾರ್ಯದರ್ಶಿ ಪ್ರಜೇಶ್ ಸ್ವಾಗತ ಭಾಷಣ ಮಾಡಲಿದ್ದಾರೆ.
17ರಂದು ಸಂಜೆ ನಡೆಯುವ ಮ್ಯೂಸಿಕಲ್ ನೈಟ್ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ರಾಜ್‌ಮೋಹನ್ ಉಣ್ಣಿ ತ್ತನ್ ಸಂಸದರು, ಎ.ಕೆ.ಎಂ ಅಶ್ರಫ್ ಶಾಸಕರು, ಎನ್.ಎ. ನೆಲ್ಲಿಕುನ್ನು ಶಾಸಕರು, ಸಿ.ಎಚ್. ಕುಂಜಂಬು ಶಾಸಕರು, ರಾಜ್ ಗೋಪಾಲ್ ಶಾಸಕರು, ಎಂ.ಎಲ್. ಅಶ್ವಿನಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಕೃಷ್ಣ ಕುಂಬಳೆ ಹಾಗೂ ಪ್ರಜೇಶ್ ಪೆರುವಾಡ್ ತಿಳಿಸಿದ್ದಾರೆ.