ದುರ್ಗಿಪಳ್ಳ ತಿರುವಿನಲ್ಲಿ ತ್ಯಾಜ್ಯ ಮಾಲಿನ್ಯ ವಿರುದ್ಧ ಟೀಮ್ ಕಲ್ಕಿ ಮಂಜೇಶ್ವರ ಶ್ರಮದಾನ; ಶುಚಿತ್ವ ಅಭಿಯಾನ ಹಾಗೂ ಸೂಚನಾ ಫಲಕ ಅಳವಡಿಕೆ

ಮಂಜೇಶ್ವರ – ಸುಬ್ರಹ್ಮಣ್ಯ ಅಂತರ್ ರಾಜ್ಯ ರಸ್ತೆ ಪೈಕಿ ಹೊಸಂಗಡಿ ಬಳಿಯ ದುರ್ಗಿಪಳ್ಳ ತಿರುವಿನಲ್ಲಿ ವ್ಯಾಪಕವಾಗಿ ತ್ಯಾಜ್ಯ ಮಾಲಿನ್ಯಗಳನ್ನು ರಸ್ತೆ ಬಳಿ ನಿಕ್ಷೇಪಿಸಿದ್ದು, ಈ ಬಗ್ಗೆ ಪಂಚಾಯತ್ ಅಧಿಕಾರಿಗಳು ಯಾವುದೇ ಕ್ರಮವನ್ನು ಕೈಗೊಳ್ಳದ ಕಾರಣ ಟೀಮ್ ಕಲ್ಕಿ ಮಂಜೇಶ್ವರ ವತಿಯಿಂದ ಇಂದು ಶ್ರಮದಾನ ನಡೆಸುವ ಮೂಲಕ ಸಂಪೂರ್ಣ ಶುಚಿತ್ವ ಅಭಿಯಾನ ನಡೆಸಿದರು.

ಬಳಿಕ ಸದ್ರಿ ಸ್ಥಳದಲ್ಲಿ ಟೀಮ್ ಕಲ್ಕಿ ಮಂಜೇಶ್ವರ ವತಿಯಿಂದ ಮುಂದಿನ ದಿನಗಳಲ್ಲಿ ತ್ಯಾಜ್ಯ ವಸ್ತುಗಳನ್ನು ನಿಕ್ಷೇಪಿಸಿದಂತೆ ಸೂಚನ ಫಲಕ ಅಳವಡಿಸಲಾಯಿತು…. ಇನ್ನು ಮುಂದಿನ ದಿನಗಳಲ್ಲಿ ತ್ಯಾಜ್ಯ ವಸ್ತುವನ್ನು ಎಸೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಮೀಂಜ ಪಂಚಾಯತ್ ಹಾಗೂ ಮಂಜೇಶ್ವರ ಪಂಚಾಯತ್ ನ ಸಂಬಂಧ ಪಟ್ಟ ಅಧಿಕಾರಿಗಳು ವಹಿಸುವುದು ಒಳ್ಳೆಯದು… ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಮಂಜೇಶ್ವರ ಅಸು ಪಾಸಿನ ಗ್ರಾಮ ಒಂದು ತ್ಯಾಜ್ಯ ಗ್ರಾಮ ಆಗುವದಂತೂ ಖಚಿತ……

ಈ ಒಂದು ಸಮಸ್ಯೆಯನ್ನು ಆದಷ್ಟು ಬೇಗನೆ 2 ಪಂಚಾಯತಿನ ಸಂಬಂಧ ಪಟ್ಟ ಅಧಿಕಾರಿಗಳು ಪರಿಹರಿಸಬೇಕು.. ಹಾಗೂ ಮುಂದಿನ ದಿನಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ತ್ಯಾಜ್ಯ ಎಸೆದವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ದುರ್ಗಿಪಳ್ಳ ಗ್ರಾಮದ ನಾಗರಿಕರು ಹಾಗೂ ಟೀಮ್ ಕಲ್ಕಿ ಸಂಸ್ಥೆಯು ಆಗ್ರಹಿಸಿದರು ..

ಈ ಸಂದರ್ಭದಲ್ಲಿ ಅರುಣ್ ಕುಮಾರ್ ದುರ್ಗಿಪ್ಪಳ್ಳ, ಹರಿಶ್ಚಂದ್ರ ಮಂಜೇಶ್ವರ,ಅಖಿಲ್ ಶೆಟ್ಟಿ ಮಂಗಳೂರು, ಸುರೇಶ್ ಚಕ್ರವರ್ತಿ ಹೊಸಂಗಡಿ,ರಂಜಿತ್ ಜೋಡುಕಲ್ಲು, ನಿಶು ಮಂಜೇಶ್ವರ, ಅಕ್ಷಯ್ ಮಜಿಬೈಲ್, ಹೇಮಂತ್ ಬೆಜ್ಜ, ಹಾಗೂ ಇತರರು ಸಹಕರಿಸಿದರು

SHARE
Loading spinner

Leave a Reply

Your email address will not be published. Required fields are marked *

error: Content is protected !!