ಮಂಜೇಶ್ವರ: ಸಹಕಾರಿ ಪಿಂಚಣಿದಾರರ ವಿವಿಧ ನ್ಯಾಯಸಮ್ಮತ ಬೇಡಿಕೆಗಳನ್ನು ಮುಂದಿಟ್ಟು ಕೇರಳ ಸಹಕಾರಿ ಪಿಂಚಣಿದಾರರ ಸಂಘಟನೆಯಾದ ಕೇರಳ ಕೋ-ಆಪರೇಟಿವ್ ಸರ್ವೀಸ್ ಪೆನ್ಷನರ್ಸ್ ಅಸೋಸಿಯೇಷನ್ ಕಾಸರಗೋಡು ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಅನಿಶ್ಚಿತಾವಧಿ ಹೋರಾಟಕ್ಕೆ ಮಂಜೇಶ್ವರದ ಹೃದಯ ಭಾಗವಾದ ಹೊಸಂಗಡಿಯಲ್ಲಿ ಚಾಲನೆ ದೊರಕಿತು.
ರಾಜ್ಯ ಸಮರ ಪ್ರಚಾರ ವಾಹನ ಜಾಥಾಗೆ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಂಡೂರು ರಾಮಕೃಷ್ಣನ್ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ವಾಹನ ಜಾಥೆಯ ಕಾಸರಗೋಡು ಜಿಲ್ಲಾ ಉದ್ಘಾಟನೆ ಹೊಸಂಗಡಿಯಲ್ಲಿ ನಡೆಯಿತು.
ಕೆ.ಆರ್. ಜಯಾನಂದ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ಶ್ರೀಮತಿ ಎ.ಎಂ. ಮೇರಿ ಟೀಚರ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು (bytes1) ಕೇರಳದ ಸಹಕಾರಿ ಕ್ಷೇತ್ರವನ್ನು ಇಂದಿನ ಹಂತಕ್ಕೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಹಕಾರಿ ಪಿಂಚಣಿದಾರರ ಹಕ್ಕುಗಳನ್ನು ನಿರ್ಲಕ್ಷಿಸುವ ಸರ್ಕಾರದ ಧೋರಣೆಯ ವಿರುದ್ಧ ತೀವ್ರ ಹೋರಾಟ ಅಗತ್ಯ ಎಂದು ಅವರು ಹೇಳಿದರು.
ಬಳಿಕ ಕೆ ಆರ್ ಜಯಾನಂದ ಮಾತನಾಡಿ (byt 2) : ಪಿಂಚಣಿದಾರರ ಹಕ್ಕುಗಳ ನಿರ್ಲಕ್ಷ್ಯದ ವಿರುದ್ಧ ನಡೆಯುವ ಈ ಜಾಥಾಕ್ಕೆ ಪೂರ್ಣ ಸಹಕಾರ ನಾವು ನೀಡಬೇಕಾಗಿದೆ ಎಂದು ಅವರು ಕರೆಯಿತ್ತರು.
ಬಳಿಕ ಜಾಥಾ ಲೀಡರ್ ಮುಂಡೂರು ರಾಮಕೃಷ್ಣನ್ ಮಾತನಾಡಿ (Byt 3) ಪಿಂಚಣಿದಾರರ ಪ್ರಮುಖ ಬೇಡಿಕೆ ಈಡೇರುವ ತನಕ ಹೋರಾಟ ಮುಂದುವರಿಸಲಿರುವುದಾಗಿ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಹಕಾರ ಜನತಾಂತ್ರಿಕ ವೇದಿಕೆ ಜಿಲ್ಲಾ ಅಧ್ಯಕ್ಷ ಶ್ರೀ ಕೆ. ನೀಲಕಂಠನ್, ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷರಾದ ಶ್ರೀ ಯು.ಕೆ. ಸೈಫುಲ್ಲ ತಂಘಲ್, ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಶ್ರೀ ಯಾದವ ಬಡಾಜೆ, ಸಂಘಟನೆಯ ಕಾರ್ಯದರ್ಶಿ ಶ್ರೀ ರಾಮಕೃಷ್ಣ ಕಡಂಬಾರ್ ಅವರು ಶುಭಾಶಯಗಳನ್ನು ಕೋರಿದರು. ಸಂಘಟನೆಯ ಅಧ್ಯಕ್ಷರಾದ ಸಿ.ವಿ. ನಾರಾಯಣನ್ ಹಾಗೂ ಕಾರ್ಯದರ್ಶಿ ಎಂ. ವಿಜಯನ್ ಉಪಸ್ಥಿತರಿದ್ದರು.
ಕಾಸರಗೋಡು ಜಿಲ್ಲೆಯಲ್ಲಿ ಜಾಥೆಗೆ ಗುರುವಾರ ಬೆಳಿಗ್ಗೆ ಮಂಜೇಶ್ವರದಲ್ಲಿ ಸ್ವಾಗತ ನೀಡಲಾಯಿತು. ನಂತರ ಬೆಳಿಗ್ಗೆ 11.00ಕ್ಕೆ ಕಾಸರಗೋಡು, ಮಧ್ಯಾಹ್ನ 12.30ಕ್ಕೆ ಪೆರುಂಬಳಂ (ಹೊಸದುರ್ಗ), ಮಧ್ಯಾಹ್ನ 3.00ಕ್ಕೆ ವೆಳ್ಳರಿಕುಂಡ್, ಸಂಜೆ 4.00ಕ್ಕೆ ನೀಲೇಶ್ವರ ಮತ್ತು ಸಂಜೆ 5.00ಕ್ಕೆ ಕಾಲಿಕಡವಿನಲ್ಲಿ ಜಾಥೆಯ ಸಮಾಪನ ನಡೆಯಲಿದೆ.
ಸಹಕಾರ ಪಿಂಚಣಿದಾರರ ಪ್ರಮುಖ ಬೇಡಿಕೆಗಳಲ್ಲಿ 2021ರಿಂದ ಸ್ಥಗಿತಗೊಳಿಸಲಾದ 10 ಶೇಕಡಾ ದುಬಾರಿ ಭತ್ಯೆಯನ್ನು ಪುನರ್‌ಸ್ಥಾಪಿಸುವುದು, ಪಿಂಚಣಿ ಪರಿಷ್ಕರಣೆಯನ್ನು ಜಾರಿಗೆ ತಂದು 15 ಶೇಕಡಾ ಮಧ್ಯಂತರ ಭತ್ಯೆ ನೀಡುವುದು, ಮೆಡಿಸೆಪ್ ಮಾದರಿಯಲ್ಲಿ ವೈದ್ಯಕೀಯ ವಿಮೆ ಜಾರಿಗೊಳಿಸುವುದು, ಪಿಂಚಣಿ ಮಿತಿಯನ್ನು ಹೆಚ್ಚಿಸುವುದು, ವೈದ್ಯಕೀಯ ಭತ್ಯೆ ಹೆಚ್ಚಿಸುವುದು, ಪಿಂಚಣಿ ಬೋರ್ಡ್ ನಿಧಿಗೆ ಸಂಘಗಳ ಪಾಲನ್ನು ಖಚಿತಪಡಿಸುವುದು ಹಾಗೂ ಪಿಂಚಣಿ ಬೋರ್ಡ್‌ನಲ್ಲಿ ಪಿಂಚಣಿದಾರರಿಗೆ ನೌಕರರ ಪ್ರತಿನಿಧ್ಯಕ್ಕೆ ಸಮಾನವಾದ ಪ್ರತಿನಿಧ್ಯ ನೀಡುವುದು ಸೇರಿವೆ.
ಪಿಂಚಣಿ ಬೋರ್ಡ್‌ನಲ್ಲಿ ಅಗತ್ಯವಿರುವ ನಿಧಿ ಲಭ್ಯವಿದ್ದರೂ ಸರ್ಕಾರದ ಖಜಾನೆಗೆ ಯಾವುದೇ ಭಾರವಿಲ್ಲದೆ ನೀಡಬಹುದಾದ ಸೌಲಭ್ಯಗಳನ್ನು ನಿರಾಕರಿಸಲಾಗುತ್ತಿರುವುದರ ವಿರುದ್ಧ ಸಾರ್ವಜನಿಕರ ಗಮನ ಸೆಳೆಯುವುದೇ ಈ ಹೋರಾಟದ ಉದ್ದೇಶವಾಗಿದೆ ಎಂದು ತಿಳಿಸಿದರು.
ಇಂದು ಆರಂಭವಾದ ರಾಜ್ಯ ಮಟ್ಟದ ವಾಹನ ಪ್ರಚಾರ ಜಾಥೆಯ ಮುಂದುವರಿದ ಭಾಗವಾಗಿ ಫೆಬ್ರವರಿ 9ರಿಂದ 17ರವರೆಗೆ ತಿರುವನಂತಪುರಂ ವಿಧಾನಸಭೆ ಭವನದ ಎದುರು ರಿಲೇ ಸತ್ಯಾಗ್ರಹ ನಡೆಸಲಾಗುವುದು. ಬಳಿಕ ಫೆಬ್ರವರಿ 23ರಿಂದ ಅನಿಶ್ಚಿತಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.