ಉಚಿತ ನೇತ್ರ ತಪಾಸಣಾ ಮತ್ತು ರಕ್ತದಾನ ಶಿಬಿರ – ಫೆ.22ರಂದು

ಮಂಜೇಶ್ವರ: ಪಟ್ಲ ಫ್ರೆಂಡ್ಸ್ ಕ್ಲಬ್ (ರಿ.) ಚೇವಾರು ಪಟ್ಲ ವತಿಯಿಂದ ಶ್ರೀ ಸತ್ಯಸಾಯಿ ಸೇವಾ ಸಮಿತಿ ಬಾಯಾರು ಇವರ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರವನ್ನು ಫೆಬ್ರವರಿ 22, 2026ರಂದು ಆಯೋಜಿಸಲಾಗಿದೆ.

ನೇತ್ರ ತಪಾಸಣಾ ಶಿಬಿರವನ್ನು ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣು ಆಸ್ಪತ್ರೆ, ಮಂಗಳೂರು ಇವರ ಸಹಕಾರದೊಂದಿಗೆ ನಡೆಸಲಾಗುತ್ತದೆ. ರಕ್ತದಾನ ಶಿಬಿರಕ್ಕೆ ನಿಟ್ಟೆ (Deemed to be University) ಜಸ್ಟಿನ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ದೇರಳಕಟ್ಟೆ ಮಂಗಳೂರು ಸಹಯೋಗ ನೀಡಲಿದೆ.

ಶಿಬಿರವು ಬೆಳಗ್ಗೆ 9.00ರಿಂದ ಮಧ್ಯಾಹ್ನ 1.00ರವರೆಗೆ ಶ್ರೀ ಶಾರದ ಎ.ಯು.ಪಿ ಶಾಲೆ, ಚೇವಾರು ಇಲ್ಲಿ ನಡೆಯಲಿದೆ.ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಭಾಗವಹಿಸಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗ ಪಡೆಯುವಂತೆ ಆಯೋಜಕರು ಮನವಿ ಮಾಡಿದ್ದಾರೆ.ಸಮಾಜ ಸೇವೆಯ ಈ ಮಹತ್ವದ ಕಾರ್ಯದಲ್ಲಿ ಸಾರ್ವಜನಿಕರ ಸಕ್ರಿಯ ಸಹಭಾಗಿತ್ವವನ್ನು ಆಯೋಜಕರು ಕೋರಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!