ಉಪ್ಪಳ: ಸಮಸ್ತ ಮದ್ರಸಾ ನಿರ್ವಹಣಾ ಸಂಘದ ಉಪ್ಪಳ ರೇಂಜ್ ಸಮಿತಿಯ ವತಿಯಿಂದ ಮದ್ರಸಾ ಶಿಕ್ಷಕರಿಗೆ ಈದ್ ಹಬ್ಬದ ಅಂಗವಾಗಿ ಸ್ನೇಹ ಸಮ್ಮಾನ ವಿತರಣೆ ಹಾಗೂ ಟಾಪ್ ಪ್ಲಸ್ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವನ್ನು ಉಪ್ಪಳ ಪಟ್ಟಣದ ಬದ್ರಿಯಾ ಮದ್ರಸಾದಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಶೀದ್ ಮಾಸ್ಟರ್ ಬೆಳಿಂಜಂ ಉದ್ಘಾಟಿಸಿದರು. ಉಪ್ಪಳ ರೇಂಜ್ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಪಳ್ಳಂ ಅಧ್ಯಕ್ಷತೆ ವಹಿಸಿದ್ದರು.
ಕಳೆದ ನಾಲ್ಕು ವರ್ಷಗಳಿಂದ ಉಪ್ಪಳ ರೇಂಜ್ ಮದ್ರಸಾ ನಿರ್ವಹಣಾ ಸಂಘದ ವತಿಯಿಂದ ಮದ್ರಸಾ ಶಿಕ್ಷಕರಿಗೆ ಹೊಸ ಬಟ್ಟೆ ಸೇರಿದಂತೆ ಈದ್ ಸ್ನೇಹ ಸಮ್ಮಾನ ನೀಡಲಾಗುತ್ತಿದೆ. ಸಂಘದ ಈ ಕಾರ್ಯ ಅತ್ಯಂತ ಪ್ರಶಂಸನೀಯವಾಗಿದೆ ಎಂದು ರಶೀದ್ ಬೆಳಿಂಜಂ ಹೇಳಿದರು.
ಕಾರ್ಯಕ್ರಮದಲ್ಲಿ ರೇಂಜ್ ಅಧ್ಯಕ್ಷ ಇಸ್ಮಾಯಿಲ್ ಅಸ್ನವಿ ಪ್ರಾರ್ಥನೆ ಸಲ್ಲಿಸಿದರು. ಜಿಲ್ಲಾ ಕೋಶಾಧಿಕಾರಿ ಸಿ.ಎಂ. ಅಬ್ದುಲ್ ಖಾದರ್, ಸಿ.ಎಂ. ವಡಕ್ಕೇಕರ, ಕಾಲಿಕಟ್ ಮೊಹಮ್ಮದ್ ಹಾಜಿ, ಅಬ್ದುಲ್ ರಹಿಮಾನ್ ಹಾಜಿ ಕಡಂಬಾರ್, ಸಲೀಂ ಹಾಜಿ ಬುರಾಖ್, ಇಬ್ರಾಹಿಂ ಹಾಜಿ ನಾಗ್ಪಾಡ, ಮೊನು ಹಾಜಿ ಕಂಚಿಲ್, ಎಂ.ಕೆ. ಅಲಿ ಮಾಸ್ಟರ್ ಅವರು ಟಾಪ್ ಪ್ಲಸ್ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಮುರಾಖಿಬ್ ಅಬ್ದುಲ್ ಖಾದರ್ ಫೈಝಿ ಪಳ್ಳಂಕೋಡ್, ಮುಫತ್ತಿಶ್ ಅಶ್ರಫ್ ಯಮಾನಿ ಕುಂಜರ್, ಮುದರಿಬ್ ಅಲಿ ಅಝ್ಹರಿ, ಕಾಜಿ ಮೊಹಮ್ಮದ್ ಫೈಝಿ, ಇಬ್ರಾಹಿಂ ಹನೀಫಿ, ಶರೀಫ್ ಹಾಜಿ ತುರತ್ತಿ, ಹನೀಫ್ ಅಲಿ ಪತ್ವಾಡಿ ಅವರು ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಪಿ.ಎ. ಅಬ್ದುಲ್ ಜಬ್ಬಾರ್ ಸ್ವಾಗತಿಸಿ ,ನೌಸೀಫ್ ನುಜೂಮಿ ಧನ್ಯವಾದವಿತ್ತರು .