ಮಾರ್ಚ್ 24ರಂದು ಶ್ರೀ ಉಳ್ಳಾಲ್ತಿ ನಾಗಬ್ರಹ್ಮ ಕಾಳಿಚಾಮುಂಡಿ ದೈವಸ್ಥಾನದ ವರ್ಷಾವಧಿ ನೇಮೋತ್ಸವ

ಹೇರೂರು: ಶ್ರೀ ಉಳ್ಳಾಲ್ತಿ ನಾಗಬ್ರಹ್ಮ ಕಾಳಿಚಾಮುಂಡಿ ದೈವಸ್ಥಾನ ಹೇರೂರು ಇಲ್ಲಿ ನಾಗದೇವರ ಪ್ರತಿಷ್ಠಾ ದಿನಾಚರಣೆ ಹಾಗೂ ನಾಗತಂಬಿಲ ಸೇವೆ ಮತ್ತು ವರ್ಷಾವಧಿ ನೇಮೋತ್ಸವವು ಭಕ್ತಿಭಾವದಿಂದ ಜರುಗಲಿದೆ.
ಮಾರ್ಚ್ 24ರಂದು ಆರಂಭವಾಗುವ ಈ ಧಾರ್ಮಿಕ ಕಾರ್ಯಕ್ರಮವು ಮಾರ್ಚ್ 25ರವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಬಡಾಜೆ ಬೂಡು ಬ್ರಹ್ಮಶ್ರೀ ಗೋಪಾಲಕೃಷ್ಣ ತಂತ್ರಿವರ್ಯರ ಉಪಸ್ಥಿತಿಯಲ್ಲಿ ಪೂಜಾ ವಿಧಿವಿಧಾನಗಳು ನೆರವೇರಲಿವೆ.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಗಣಹೋಮ, ನಾಗದೇವರಿಗೆ ನಾಗತಂಬಿಲ ಸೇವೆ, ಸಂಜೆ ಭಂಡಾರ ಏರಿಸುವುದು ಹಾಗೂ ವಿವಿಧ ದೈವಗಳ ನೇಮೋತ್ಸವಗಳು ನಡೆಯಲಿವೆ.


ರಾತ್ರಿ ಉಳ್ಳಾಲ್ತಿ ದೈವ, ಬಿಲ್ಲಾರ, ಮಹಿಷಾಂದಾಯ, ಪೊಟ್ಟಲ್ಲಾಯ ಮತ್ತು ಪಿಲಿಚಾಮುಂಡಿ ದೈವಗಳ ನೇಮೋತ್ಸವಗಳು ಜರುಗಲಿದ್ದು, ಮಾರ್ಚ್ 25ರ ಬೆಳಿಗ್ಗೆ ಶ್ರೀ ಕಾಳಿಚಾಮುಂಡಿ ದೈವದ ನೇಮೋತ್ಸವ ಹಾಗೂ ನಂತರ ಪಂಜುರ್ಲಿ, ಜೂಮಾದಿ ಬಂಟ ಮತ್ತು ಕೊರತಿ ದೈವಗಳ ನೇಮೋತ್ಸವ ನಡೆಯಲಿದೆ.
ಈ ಪುಣ್ಯ ಕಾರ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ, ದೈವಗಳ ಆಶೀರ್ವಾದ ಪಡೆಯುವಂತೆ ದೈವಸ್ಥಾನ ಸಮಿತಿ ವಿನಂತಿಸಿದೆ

SHARE
Loading spinner

Leave a Reply

Your email address will not be published. Required fields are marked *

error: Content is protected !!