ಮೂಡಂಬೈಲ್ ಪಜಿಂಗಾರ್ ಸಾಲಿಯಾನ್ ಕುಟುಂಬದ ನೂತನ ತರವಾಡಿನ ಗ್ರಹಪ್ರವೇಶ, ಬ್ರಹ್ಮಕಲಶ ಪ್ರತಿಷ್ಠೆ ಹಾಗೂ ನೇಮೋತ್ಸವ ಕಾರ್ಯಕ್ರಮಗಳು ಏಪ್ರಿಲ್ 12ರಂದು ಭಕ್ತಿಶ್ರದ್ದೆಯಿಂದ ನೆರವೇರಿದವು.
ಕಾರ್ಯಕ್ರಮದ ಪೂರ್ವಭಾವಿಯಾಗಿ ಏಪ್ರಿಲ್ 11ರಂದು ತಂತ್ರಿಗಳ ಉಪಸ್ಥಿತಿಯಲ್ಲಿ ಸ್ಥಳ ಶುದ್ಧಿ, ಪುಣ್ಯಹ ವಚನ, ಕಲಶ ಶುದ್ಧಿ, ವಾಸ್ತು ಹೋಮ ಹಾಗೂ ವಾಸ್ತು ಬಲಿ ವಿಧಿವಿಧಾನಗಳು ವಿಜೃಂಭಣೆಯಿಂದ ನಡೆಯಿತು.
ಏಪ್ರಿಲ್ 12ರಂದು ಬ್ರಹ್ಮಶ್ರೀ ಬಡಾಜೆಬೀಡು ಗೋಪಾಲ ಕೃಷ್ಣ ತಂತ್ರಿಯವರ ಸಾನ್ನಿಧ್ಯದಲ್ಲಿ ಬೆಳಗ್ಗೆ 8:45ಕ್ಕೆ ಗ್ರಹಪ್ರವೇಶ ಮತ್ತು ಮಹಾ ಪೂಜೆ ನೆರವೇರಿತು. ಮಧ್ಯಾಹ್ನ ಮಲರಾಯ ದೈವದ ನೇಮ, ರಾತ್ರಿ ಪಂಜುರ್ಲಿ–ಕಲ್ಲುರ್ಟಿ ದೈವದ ಕೋಲ ಸೇವೆ ಹಾಗೂ ಗುಳಿಗ ದೈವದ ಕೋಲ ಸೇವೆ ನಡೆಯಿತು.
ಇದೇ ವೇಳೆ ರಾತ್ರಿ ಅನ್ನಪ್ರಸಾದ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಧಾರ್ಮಿಕ ಸಂಭ್ರಮದಲ್ಲಿ ಪಾಲ್ಗೊಂಡರು.