ಕನ್ಯಾನ ಗ್ರಾಮದ ಶ್ರೀ ಕ್ಷೇತ್ರ ಮುಗುಳಿಗುಡ್ಡೆಯ ದಿವ್ಯ ಸಾನಿಧ್ಯದಲ್ಲಿ ಅಷ್ಟಮಂಗಲ ಪ್ರಶ್ನೆ ನಡೆಸುವ ಬಗ್ಗೆ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ವಿಟ್ಲ ಅರಮನೆಯ ಶ್ರೀ ಬಂಗಾರು ಅರಸರ ನೇತೃತ್ವದ ಪ್ರಶ್ನಾ ಚಿಂತನಾ ಸಮಿತಿಯ ವತಿಯಿಂದ ಮೇ 21.05.2026 ಗುರುವಾರದಿಂದ ಮೂರರಿಂದ ಐದು ದಿನಗಳ ಕಾಲ ಈ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ಎಂದು ಇತ್ತೀಚೆಗೆ ನಡೆದ ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕಳೆದ ಮಹಾಶಿವರಾತ್ರಿಯಂದು ಮಹಾ ಸನ್ನಿಧಿಯಲ್ಲಿ ಕೈಗೊಂಡ ನಿರ್ಣಯದಂತೆ, ಈ ಅಷ್ಟಮಂಗಲ ಪ್ರಶ್ನೆ ಕಾರ್ಯವು ಕಾರಿಂಜದ ಶ್ರೀ ರಾಘವೇಂದ್ರ ಭಟ್ಟ ಅವರ ಮುಂದಾಳುತ್ವದಲ್ಲಿ ನಡೆಯಲಿದೆ. ಮುಗುಳಿಗುಡ್ಡೆಗೆ ಹೊಂದಿಕೊಂಡಿರುವ ಮರ್ತನಾಡಿಯ ಶ್ರೀ ನೀರ್ಪಾಜೆ ವಿಘ್ನರಾಜ ಭಟ್ಟರ ಕೇದಗೆಯ ಬನ ಇರುವ ನಿವೇಶನದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಪ್ರತೀ ಭಾನುವಾರ ಕಾರ್ಯಕ್ರಮ ಸ್ಥಳದಲ್ಲಿ ಸಾರ್ವಜನಿಕರಿಂದ ಶ್ರಮದಾನ ಸೇವೆ ನಡೆಯಲಿದ್ದು, ಗ್ರಾಮಸ್ಥರು ತನು-ಮನ-ಧನಗಳಿಂದ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಲು ಸಮಿತಿ ವಿನಂತಿಸಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಸಮಿತಿ ಕೋರಿದೆ.
78betvip, hoping this VIP title brings some good perks! Will see if the support and bonuses are actually VIP-level! Gonna check it! 78betvip
xoso666app, eh? Give it a look to tell me! : xoso666app
Vuagaazcs, I’m kinda keen to see what this is about honestly myself, so maybe you should check them out first and then tell me all about it! vuagaazcs