ಕಾಸರಗೋಡು ಮಂಗಳೂರು ಅಂತರ ರಾಜ್ಯ ಮಾರ್ಗದಲ್ಲಿ ವೇಗವಾಗಿ ಸಂಚರಿಸುವ ಕೇರಳ ಕೆ.ಎಸ್.ಆರ್. ಟಿ.ಸಿ ಫಾಸ್ಟ್ ಪ್ಯಾಸೆಂಜರ್ ಬಸ್, ಬೀರಿ ಬಸ್ ಸ್ಟಾಪ್ ನಲ್ಲಿ ನಿಲುಗಡೆಯಾಗಬೇಕೆಂದು ಕಾಸರಗೋಡು ಕಡೆಗೆ ದಿನನಿತ್ಯ ಹೋಗಿ ಬರುವ ಬಸ್ಸು ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ.
ಈ ಫಾಸ್ಟ್ ಪ್ಯಾಸೆಂಜರ್ ಕೆ. ಎಸ್.ಆರ್. ಟಿ. ಸಿ ಬಸ್ಸು ತಲಪಾಡಿ ಮತ್ತು ತೊಕ್ಕೋಟು ಬಸ್ ಸ್ಟಾಪ್ ನಲ್ಲಿ ಮಾತ್ರ ನಿಲುಗಡೆಯಿದೆ. ದಿನಂಪ್ರತಿ ನೂರಾರು ಸಂಖ್ಯೆಯಲ್ಲಿ ಕಾಸರಗೋಡು ಬೀರಿ ಮಾರ್ಗವಾಗಿ ಉದ್ಯೋಗ ವ್ಯವಹಾರ ಹಾಗೂ ಇನ್ನಿತರ ಕೌಟುಂಬಿಕ ಅಗತ್ಯಗಳಿಗಾಗಿ ಪ್ರಯಾಣಿಸುವ ದಿನನಿತ್ಯದ ಯಾತ್ರಿಕರಿದ್ದಾರೆ. ಆದುದರಿಂದ ಎನ್. ಎಚ್ 66 ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ವೇಗವಾಗಿ ತೆರಳಬೇಕಾದ ಪ್ರಯಾಣಿಕರಿಗಾಗಿ ಬೀರಿ ಬಸ್ ಸ್ಟಾಪ್ ನಲ್ಲಿ ಈ ಮೇಲಿನ ಬಸ್ಸು ನಿಲುಗಡೆಯಾಗಬೇಕೆಂದು ಉಳ್ಳಾಲ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ವಿಧಾನಸಭಾ ಮಾನ್ಯ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ವಾಟ್ಸ್ ಪ್, ಇ-ಮೇಲ್ ಮೂಲಕ ಮನವಿಯನ್ನು ನೀಡಿ ಒತ್ತಾಯಿಸಲಾಗಿದೆ.
ಬೀರಿಯ ಕೋಟೆಕಾರು ಉಳ್ಳಾಲ ಸಮೀಪದಲ್ಲೇ ಉಳ್ಳಾಲ ರೈಲ್ವೆ ಸ್ಟೇಷನ್, ಮಂಗಳೂರು ವಿಶ್ವವಿದ್ಯಾನಿಲಯ, ಹಲವು ವೈದ್ಯಕೀಯ ಕಾಲೇಜು, ಆಸ್ಪತ್ರೆಗಳು ಈ ಭಾಗದಲ್ಲಿ ಕಾರ್ಯಾಚರಿಸುತ್ತಿದೆ. ಬೀರಿಯ ಮೂಲಕ ದಿನನಿತ್ಯ ತುರ್ತು ಅಗತ್ಯಕ್ಕಾಗಿ ಕಾಸರಗೋಡಿಗೆ ಯಾತ್ರಿಕರು ಪ್ರಯಾಣಿಸುತ್ತಾರೆ. ಆದುದರಿಂದ ಕೇರಳ ಕೆ.ಎಸ್.ಆರ್. ಟಿ.ಸಿ ಆಯುಕ್ತರಿಗೆ,ಕಾಸರಗೋಡು ಡಿಪೋ ಅಧಿಕಾರಿಗಳಿಗೆ ಹಾಗೂ ಕರ್ನಾಟಕ ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿಯ ಗಮನಕ್ಕೆ ಸಾರ್ವಜನಿಕರು, ಇಲಾಖೆಯ ಸಂಬಂಧ ಪಟ್ಟ ಅಧಿಕಾರಿಗಳಿಗೆ ಈ ಮನವಿಯನ್ನು ವಿವಿಧ ದೃಶ್ಯ ಪತ್ರಿಕಾ ಮಾಧ್ಯಮಗಳು ಸಾಮಾಜಿಕ ಜಾಲತಾಣಗಳ ಮೂಲಕ ಬಿತ್ತರಿಸಿ, ಪ್ರಕಟಿಸಿ ಸಹಕರಿಸಬೇಕೆಂದು ಕಾಸರಗೋಡು ಕನ್ನಡ ಗ್ರಾಮದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರು,ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕದ ಅಧ್ಯಕ್ಷರು,ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವರಾಮ ಕಾಸರಗೋಡು ಪ್ರಕಟಣೆಯ ಮೂಲಕ ಒತ್ತಾಯಿಸಿದ್ದಾರೆ. ಕರ್ನಾಟಕ ಕೆ. ಎಸ್. ಆರ್. ಟಿ ಸಿ ಯಾ ಕಾಸರಗೋಡು – ಮಂಗಳೂರು ಮಾರ್ಗದಲ್ಲಿ ವೇಗವಾಗಿ ಸಂಚರಿಸುವ ರಾಜಹಂಸ ಬಸ್ಸು ಗಳು ಬೀರಿ ಬಸ್ ಸ್ಟಾಪ್ ನಲ್ಲಿ ನಿಲುಗಡೆಯನ್ನು ಮಾಡುತಿದ್ದೆ.
ಈ ಮನವಿಯನ್ನು ತಮ್ಮ ವಾಟ್ಸ್ ಪ್ ಗ್ರೂಪ್ ಗಳು ಫೇಸ್ ಬುಕ್ ಮತ್ತು ಇತರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ (ಫಾರ್ವರ್ಡ್) ಮೂಲಕ ಎಲ್ಲಾ ಸಮುದಾಯದ ಬಂಧುಗಳು ಸಂಬಂಧ ಪಟ್ಟವರಿಗೆ ತಲುಪಿಸಲು ಕೋರಲಾಗಿದೆ. ಶಿವರಾಮ ಕಾಸರಗೋಡು ಅಧ್ಯಕ್ಷರು, ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.),ಕನ್ನಡ ಗ್ರಾಮ, ಕಾಸರಗೋಡು -671121
ಮೊಬೈಲ್ :-9448572016