​ಕೇರಳ ಚುನಾವಣಾ ಫಲಿತಾಂಶ: ಎಡಕೋಟೆ ನಡುಗಿಸಿದ ಯುಡಿಎಫ್ ಸುನಾಮಿ: ಕಮಲ ಪಾಳಯದಲ್ಲಿ ಹೊಸ ಸಂಚಲನ

​ ಮಂಜೇಶ್ವರ: ಕೇರಳ ವಿಧಾನಸಭಾ ಚುನಾವಣೆಯ ಮೊದಲ ಎರಡು ಹಂತದ ಮತ ಎಣಿಕೆ ಮುಕ್ತಾಯವಾಗಿದ್ದು, ಇಡೀ ರಾಜ್ಯದಲ್ಲಿ ಯುಡಿಎಫ್ ಅಲೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಕಳೆದ ಹತ್ತು ವರ್ಷಗಳಿಂದ ಭದ್ರವಾಗಿದ್ದ ಎಡರಂಗದ ಕೋಟೆ ಈ ಬಾರಿ ಧರಾಶಾಯಿಯಾಗುವ ಲಕ್ಷಣಗಳು ಕಾಣಿಸುತ್ತಿವೆ.
​ ಬೆಳಿಗ್ಗೆ 10:20ರ ವೇಳೆಗೆ
​ಯುಡಿಎಫ್: 91 ಸ್ಥಾನಗಳಲ್ಲಿ ಮುನ್ನಡೆ
​ಎಲ್ ಡಿ ಎಫ್: 46 ಸ್ಥಾನಗಳಲ್ಲಿ ಮುನ್ನಡೆ
​ಎನ್ ಡಿಎ: 02 ಸ್ಥಾನಗಳಲ್ಲಿ ಮುನ್ನಡೆ


​ ಕಣ್ಣೂರಿನ ಧರ್ಮಡಂ ಕ್ಷೇತ್ರದಲ್ಲಿ ಸ್ವತಃ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರೇ ಆರಂಭಿಕ ಹಿನ್ನಡೆ ಅನುಭವಿಸಿರುವುದು ದೊಡ್ಡ ಅಚ್ಚರಿ ಮೂಡಿಸಿದೆ. ಎಡರಂಗದ ಪ್ರಮುಖ ಸಚಿವರು ಕೂಡ ಪರಾಜಯದ ಭೀತಿಯಲ್ಲಿದ್ದಾರೆ.
​ ಮಂಜೇಶ್ವರದಲ್ಲಿ ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ ಅಶ್ರಫ್ ಬರೋಬ್ಬರಿ 6,370 ಮತಗಳ ಬೃಹತ್ ಮುನ್ನಡೆಯೊಂದಿಗೆ ಜಯದತ್ತ ದಾಪುಗಾಲು ಹಾಕುತ್ತಿದ್ದಾರೆ.
ಕಾಸರಗೋಡಿನಲ್ಲಿ ಯುಡಿಎಫ್ 2,453 ಮತಗಳ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಎಡರಂಗದ ಭದ್ರಕೋಟೆಗಳಾದ ಉದುಮ ಮತ್ತು ತ್ರಿಕರಿಪುರದಲ್ಲೂ ಯುಡಿಎಫ್ ಬಾವುಟ ಹಾರುತ್ತಿದೆ.
​ ಕೇರಳದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಎನ್ ಡಿಎ ಮೈತ್ರಿಕೂಟ ಮೂರು ಕ್ಷೇತ್ರಗಳಲ್ಲಿ ಪ್ರಬಲ ಪೈಪೋಟಿ ನೀಡುವ ಮೂಲಕ ರಾಜಕೀಯ ಹೊಸ ಆಯಾಮಕ್ಕೆ ನಾಂದಿ ಹಾಡಿದೆ.
​ ಹತ್ತು ವರ್ಷಗಳ ಎಡರಂಗದ ಆಡಳಿತಕ್ಕೆ ಕೇರಳದ ಮತದಾರ ಈ ಬಾರಿ ಬ್ರೇಕ್ ಹಾಕುವ ಮೂಡ್‌ನಲ್ಲಿದ್ದು, ಯುಡಿಎಫ್ ಪಾಳಯದಲ್ಲಿ ಈಗಾಗಲೇ ವಿಜಯೋತ್ಸವದ ಸಂಭ್ರಮ ಮನೆಮಾಡಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!